ಆದೇಶ ಪಾಲಿಸದ ಆಸ್ಪತ್ರೆಗಳ ವಿರುದ್ಧ ಕ್ರಮಕ್ಕೆ ನಿರ್ಧಾರ.!

108
rtmp://telugusolutions.com:1935/nammurutv/nammurutv

ಬೆಂಗಳೂರು/ ಮಹದೇವಪುರ:ಖಾಸಗೀ ಆಸ್ಪತ್ರೆ ಗಳು ಅರ್ಧದಷ್ಟು ಬೆಡ್ ಗಳನ್ನು ಕೋವಿಡ್ ಚಿಕಿತ್ಸೆಗೆ ನೀಡಬೇಕು.ಇಲ್ಲವಾದರೇ ಅಧಿಕಾರಿ ಗಳೊಂದಿಗೆ ಆಸ್ಪತ್ರೆಗಳಿಗೆ ಹೇಳದೆ ಭೇಟಿ ನೀಡಿ ಪರಿಶೀಲಿಸಿ ಸೂಕ್ತಕ್ರಮ ಕೈಗೊಳ್ಳಲಾಗುವುದು ಎಂದು ನಗರಾಭಿವೃದ್ಧಿ ಸಚಿವ ಬೈರತಿ ಬಸವ ರಾಜ್ ಎಚ್ಚರಿಕೆ ನೀಡಿದರು.

ಹೂಡಿ ಸಮೀಪದ ಶರಟಾನ್ ಹೋಟೆಲ್ ನಲ್ಲಿ ಏರ್ಪಡಿಸಿದ್ದ ಮಹದೇವಪುರ ಬಿಬಿಎಂಪಿ ವಲಯದಲ್ಲಿ ಕೋವಿಡ್-೧೯ ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳ ಕುರಿತು ಅಧಿಕಾರಿಗಳ ಸಭೆ ಹಾಗೂ ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರು, ವಲಯ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.

ಬೆಂಗಳೂರಲ್ಲಿ ಹೆಚ್ಚು ಕೊರೋನಾ ಪ್ರಕರಣಗಳು ಬರುತ್ತಿವೆ,ಸೋಂಕಿತರ ಮೂಲ ಪತ್ತೆ ಹಚ್ಚುವ ಮೂಲಕ ಕೋವಿಡ್ ನಿಯಂತ್ರಣಕ್ಕೆ ಮುಂದಾಗ ಬೇಕು.ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆ ಯಾಗದಂತೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು.

ಇದೇ ಸಂದರ್ಭದಲ್ಲಿ ತಕ್ಷಣ ಕೋವಿಡ್ ಪರೀಕ್ಷೆ ರಿಪೋರ್ಟ್ ಬರುವ ಡಿವೈಸ್ ಅನ್ನು ಉದ್ಘಾಟನೆ ಮಾಡಿ ಆರೋಗ್ಯ ಅಧಿಕಾರಿಗಳಿಗೆ ಹಸ್ತಾಂತರ ಮಾಡಿದರು.

ನಂತರ ಹೆಚ್ಎಎಲ್ ಕಲ್ಯಾಣ ಮಂಟಪದಲ್ಲಿ ಸಿದ್ದಪಡಿಸಿದ್ದ ಕೊರೊನಾ ಕೇರ್ ಸೆಂಟರ್ ಪರಿ ವೀಕ್ಷಣೆ ಮಾಡಿದರು.

ಈ ಸಂಧರ್ಭದಲ್ಲಿ ವಿಶೇಷ ಆಯುಕ್ತ ರಣದೀಪ್, ವಲಯ ಉಸ್ತುವಾರಿ ಮಂಜುಳಾ,ಜಂಟಿಆಯುಕ್ತ ವೆಂಕಟಾಚಲಪತಿ,ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಶ್ರೀನಿವಾಸ್,ಕ್ಷೇತ್ರ ಆರೋಗ್ಯ ಅಧಿಕಾರಿ ಡಾ.ಚಂದ್ರಶೇಖರ್ ಸೇರಿದಂತೆ ಖಾಸಗೀ ಆಸ್ಪತ್ರೆ ಗಳ ಮುಖ್ಯಸ್ಥರು, ಬಿಬಿಎಂಪಿ,ಆರೋಗ್ಯ ಅಧಿಕಾರಿಗಳು ಹಾಜರಿದ್ದರು.