“ಜಲಾವೃತ್ತಗೊಂಡ ರಸ್ತೆಗಳಲ್ಲಿ ಜನರ ಪರದಾಟ”ದ ಸುದ್ದಿ ಫಲಶೃತಿ

1279
rtmp://telugusolutions.com:1935/nammurutv/nammurutv

ಚಿಕ್ಕಬಳ್ಳಾಪುರ / ಶಿಡ್ಲಘಟ್ಟ : ನೆನ್ನೆ ಸಂಜೆ ಸುರಿದ ಬಾರಿ ಮಳೆಯಿಂದ ಜಲಾವೃತ್ತಗೊಂಡ ರಸ್ತೆಗಳಲ್ಲಿ ಜನರ ಪರದಾಟದ ಜೊತೆಗೆ ಮನೆ ಮತ್ತು ಅಂಗಡಿಗಳಿಗೆ ನೀರು ನುಗ್ಗಿದ ಘಟನೆಯ ನಮ್ಮೂರುಟಿವಿ ಯಲ್ಲಿ ಸುದ್ದಿ ಪ್ರಸಾರವಾದ ಹಿನ್ನೆಲೆ

ಎಚ್ಚೆತ್ತ ಅಧಿಕಾರಿಗಳು ಅಂಗಡಿಗಳ ಮುಂದೆ ಒತ್ತುವರಿ ತೆರವುಗೊಳಿಸಿದ ಘಟನೆ ಇಂದು ನಗರದಲ್ಲಿ ನಡೆಯಿತು.

ನಗರದ ದಿಬ್ಬೂರಹಳ್ಳಿ ರಸ್ತೆಯ ನಗರಸಭೆ ಅಂಗಡಿಗಳಿಂದ ಚರ್ಚ್ ವರೆಗೂ ರಸ್ತೆಯ ಎರಡೂ ಬದಿಯಲ್ಲಿರುವಂತ ಅಂಗಡಿ ಮುಗ್ಗಟ್ಟು ಚರಂಡಿಯ ಮೇಲೆ ಕಲ್ಲು ಚಪ್ಪಡಿಗಳು ಹಾಕಿ ಚರಂಡಿಯನ್ನು ಮುಚ್ಚಿದ್ದರು. ಇದರಿಂದ ಕಸ ತೆಗೆಯಲು ನಗರಸಭೆಯ ಪೌರಕಾರ್ಮಿಕರಿಗೆ ಬಹಳಷ್ಟು ತೊಂದರೆಯಾಗಿತ್ತು.

ಮಳೆಯ ನೀರು ಚರಂಡಿಗಳಲ್ಲಿ ಸರಾಗವಾಗಿ ಹರಿಯದೆ ಅಕ್ಕಪಕ್ಕದ ಮನೆಗಳಿಗೆ ನುಗ್ಗಿದ ಪರಿಣಾಮ ಅಗಂಡಿ ಮತ್ತು ಬಹಳಷ್ಟು ಮನೆಗಳಿಗೆ ಬಾರಿ ತೊಂದರೆಯ ಅನುಭವಿಸುವಂತಾಗಿತ್ತು. ನೆನ್ನೆ ಸುದ್ದಿ ಬಿತ್ತರವಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಅಧಿಕಾರಿಗಳು ಬೆಳಗ್ಗೆಯಿಂದಲೇ ಒತ್ತುವರಿ ತೆರವುಗೊಳಿಸುವ ಕಾರ್ಯಕ್ಕೆ ಮುಂದಾದರು.

ನಗರಸಭೆ ಆಯುಕ್ತ ಚಲಪತಿ ಮತ್ತು ತಾಲ್ಲೂಕು ತಹಶೀಲ್ದಾರ್ ಅಜಿತ್ ಕುಮಾರ್ ರೈ ನೇತೃತ್ವದಲ್ಲಿ ಅಂಗಡಿಗಳ ಮುಂಭಾಗ ಹಾಕಿದ್ದ ಗೋಡೆ,ಕಲ್ಲು ಚಪ್ಪಡಿ, ಮೇಲ್ಚಾವಣೆ ಶೀಟುಗಳು ಹಾಗೂ ಕಬ್ಬಿಣದ ಪೈಪುಗಳನ್ನು ಜೆಸಿಬಿ ಮೂಲಕ ಯಾರ ಮುಲಾಜಿಗೆ ಕಿವಿಕೊಡದೆ ತೆರವು ಗೊಳಿಸುವಂತಹ ಉತ್ತಮ ಕೆಲಸ ಮಾಡಿದ್ದಾರೆ.

ರಸ್ತೆಯ ಎರಡು ಕಡೆ ಚರಂಡಿಗಳಲ್ಲಿ ಕೊಳಕು ಸುಮಾರು ನಾಲ್ಕೈದು ಅಡಿಗಳಷ್ಷು ಕೊಳಕು ತುಂಬಿಕೊಂಡಿವುದರಿಂದ ಚರಂಡೀಲಿ ಹರಿಯುವ ನೀರು ರಸ್ತೆಯ ಮೇಲೆ ಹರಿಯುವಂತಾಗಿದೆ. ಸುಮಾರು ನಾಲ್ಕೈದು ಅಡಗಿಳ ನೀರಲ್ಲಿ ಜನಸಾಮಾನ್ಯರು ಪರದಾಡುವಂತಾಗಿ ಬಹಳಷ್ಟು ತೊಂದರೆಗಳನ್ನು ಅನುಭವಿಸುವಂತಾಗಿತ್ತು. ಅಂಗಡಿಯೊಳಗೊ ನೀರು ನುಗ್ಗಿದ್ದರಿಂದ ವ್ಯಾಪಾರಸ್ಥರಿಗೂ ಬಹಳ ತೊಂದರೆಯಾಗುತ್ತಿತ್ತು

ಸುಮಾರು ವರ್ಷಗಳಿಂದ ಚರಂಡಿಯನ್ನು ಸ್ಚಚ್ಚಗೊಳಿಸಿರಲಿಲ್ಲ. ಈ ಹಿನ್ನಲೆಯಲ್ಲಿ ನೊಂದಜನ ನಗರಸಭೆಗೆ ಹಲವಾರು ದೂರು ನೀಡಿದರೂ ಕಾಟಾಚಾರಕ್ಕೆ ಬಂದು ಕೆಲಸಮಾಡಿ ಕೈ ತೊಳೆಯುತ್ತಿದ್ದರು ಎಂದು ಸ್ಥಳಿಯರು ಆಕ್ರೋಶ ವ್ಯಕ್ತಪಡಿಸಿದರು.

ಅಧಿಕಾರಿಗಳು ಎಚ್ಚೆತ್ತುಕೊಂಡು ಈದಿನ ಮಾಡುತ್ತಿರುವಂತ ಕೆಲಸ ಈ ಮೊದಲೆ ಮಾಡಿದ್ದರೆ ಇಂಥ ತೊಂದರೆಗಳು ಆಗುತ್ತಿರಲಿಲ್ಲ. ಅಂಗಡಿಗಳಿಗೆ ಮತ್ತು ಮನೆಗಳಿಗೆ ಕೊಳಚೆ ನೀರು ನುಗ್ಗುತ್ತಿರಲಿಲ್ಲ ಎಂದರು.

ತೆರವುಗೊಳಿಸುವ ಕಾರ್ಯಾಚರಣೆ ವೇಳೆ ಆರಕ್ಷಕ ವೃತ್ತ ನಿರೀಕ್ಷ ವೆಂಕಟೇಶ್ ನೇತೃತ್ವದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಸೂಕ್ತ ಬಂದೋಬಸ್ತು ಮಾಡಲಾಗಿತ್ತು.

ತೆರವು ಕಾರ್ಯಾಚಾರಣೆಯನ್ನು ಕುತೂಹಲ ದಿಂದ ವೀಕ್ಷಿಸುತ್ತಾ ನಿಟ್ಟುಸಿರುಬಿಟ್ಟ ಸಾರ್ವಜನಿಕರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಸಮಸ್ಯೆಯನ್ನು ಸುದ್ದಿಮಾಡಿ ಅಧಿಕಾರಿಗಳ ಕಣ್ತೆರೆಸಿದ ನಮ್ಮೂರು ಟಿವಿ ವಾಹಿನಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

 

ವರದಿ:ಈಧರೆ ಪ್ರಕಾಶ್
ನಮ್ಮೂರು ಟಿವಿ. ಶಿಡ್ಲಘಟ್ಟ.