ತಹಸೀಲ್ದಾರ್ ಹತ್ಯೆ ಖಂಡಿಸಿ ಸರ್ಕಾರಿ ನೌಕರರ ಸಂಘದ ವತಿಯಿಂದ ಪ್ರತಿಭಟನೆ.

165
rtmp://telugusolutions.com:1935/nammurutv/nammurutv

ಮಂಡ್ಯ/ಮಳವಳ್ಳಿ :ಬಂಗಾರಪೇಟೆ ತಾಲ್ಲೂಕು ತಹಸೀಲ್ದಾರ್ ಬಿ.ಕೆ ಚಂದ್ರಮೌಳೇಶ್ವರ ರವರ ಹತ್ಯೆಯನ್ನು ಖಂಡಿಸಿ ಮಳವಳ್ಳಿತಾಲ್ಲೂಕು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ದ ವತಿಯಿಂದ ಆರೋಪಿಗೆ ಕಠಿಣ ಶಿಕ್ಷೆಯಾಗ ಬೇಕು ಎಂದು ಒತ್ತಾಯಿಸಿ ಮಳವಳ್ಳಿ ಪಟ್ಟಣದಲ್ಲಿ ಸಾಂಕೇತಿಕ ಪ್ರತಿಭಟನೆ ನಡೆಸಲಾಯಿತು

ಪಟ್ಟಣದ ತಾಲ್ಲೂಕು ಕಚೇರಿ ಮುಂದೆ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಮಲ್ಲಿ ಕಾರ್ಜುನಯ್ಯ ನೇತೃತ್ವದಲ್ಲಿ 30 ಕ್ಕೂ ಹೆಚ್ಚು ವಿವಿದ ಇಲಾಖೆಗಳ ನೌಕರರು ಕೃತ್ಯ ವೆಸಿಗಿದ ಆರೋಪಿಗೆ ಕಠಿತ ಶಿಕ್ಷೆಯಾಗ ಬೇಕು ಎಂದು ಘೋಷಣೆ ಕೂಗಿದರು.

ಇನ್ನೂ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನಯ್ಯ ಮಾತನಾಡಿ, ಸರ್ಕಾರಿ ನೌಕರರಿಗೆ ರಕ್ಷಣೆ ಇಲ್ಲವಾಗಿದ್ದು,ನೌಕರರರಿಗೆ ಸೂಕ್ತರಕ್ಷಣೆ ಹೊಸ ಕಾನೂನು ಜಾರಿಯಾಗ ಬೇಕಾಗಿದೆ. ರಾಜ್ಯದ ಸರ್ಕಾರಿ ನೌಕರರು ನಿರ್ಭೀತಿ ಯಿಂದ ಕಾರ್ಯ ನಿರ್ವಹಿಸುವ ವಾತಾವರಣ ನಿರ್ಮಾಣಮಾಡಲು ಅಗತ್ಯ ರಕ್ಷಣಾ ಕ್ರಮಗಳನ್ನು ಕೈಗೊಳ್ಳ ಬೇಕು ಎಂದರು

ಇನ್ನೂ ತಹಸೀಲ್ದಾರ್ ಚಂದ್ರಮೌಳಿ ರವರಿಗೆ ಮನವಿ ಸಲ್ಲಿಸಲಾಯಿತು

ಬಳಿಕ ತಹಸೀಲ್ದಾರ್ ಚಂದ್ರಮೌಳಿ ಮಾತನಾಡಿ ಪ್ರತಿಭಟನೆ ಯಲ್ಲಿ ನಾನು ಭಾಗಿಯಾಗಿದ್ದೇನೆ. ಹತ್ಯೆಯನ್ನು ಖಂಡಿಸುತ್ತೇನೆ ನಿಮ್ಮ ಮನವಿ ಯನ್ನು ಮುಖ್ಯ ಕಾರ್ಯದರ್ಶಿ ಗಳು ತಲುಪಿಸುವ ವ್ಯವಸ್ಥೆ ಮಾಡುತ್ತೇನೆ ಎಂದರು

ಪ್ರತಿಭಟನೆಯಲ್ಲಿ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮಲ್ಲಿ ಕಾರ್ಜುಯ್ಯ,ಕಾರ್ಯದರ್ಶಿ ವೆಂಕ ಟೇಶ್,ಉಪತಹಸೀಲ್ದಾರ್ ಕುಮಾರ,ಚಂದ್ರ ಶೇಖರ ಅಚಾರ್,ಮಧು,ರವಿ ಸೇರಿದಂತೆ ಮತ್ತಿತ್ತರರು ಇದ್ದರು

ವರದಿ : ಎ.ಎನ್ ಲೋಕೇಶ್