ಬಿಜೆಪಿ ಪಕ್ಷದ ವತಿಯಿಂದ ತರಕಾರಿ, ಮಾಸ್ಕ್ ವಿತರಣೆ.

367
rtmp://telugusolutions.com:1935/nammurutv/nammurutv

ಮಂಡ್ಯ/ಮಳವಳ್ಳಿ:ಬಿಜೆಪಿ ಪಕ್ಷದ ವತಿಯಿಂದ ಕೋರೋನಾ ವೈರಸ್ ನಿಂದ ಸೀಲ್ ಡೌನ್ ಯಾದ ಪ್ರದೇಶ ಜನರಿಗೆ ತರಕಾರಿ ಹಾಗೂ‌ ಮಾಸ್ಕ್ ವಿತರಣಾ ಕಾರ್ಯಕ್ರಮ ಮಳವಳ್ಳಿ ತಾಲ್ಲೂಕಿನ ಚೊಟ್ಟನಹಳ್ಳಿ ಗ್ರಾಮದಲ್ಲಿ ನಡೆಸಲಾಯಿತು. ಬಿಜೆಪಿ ಪಕ್ಷದ ರಾಜ್ಯ ಹಿರಿಯ ಉಪಾಧ್ಯಕ್ಷ ಹಾಗೂ ಮಾಜಿ ಸಚಿವ ಬಿ ಸೋಮಶೇಖರ್ ಹಾಗೂ ಬಿಜೆಪಿ ಪಕ್ಷ ಸಿದ್ದರಾಮಯ್ಯ ನೇತೃತ್ವ ದಲ್ಲಿ ಚೊಟ್ಟನಹಳ್ಳಿ ಶಕ್ತಿ ಕೇಂದ್ರದಲ್ಲಿ 350 ಜನರಿಗೆ ತರಕಾರಿ ಹಾಗೂ 2 ಸಾವಿರ ಮಾಸ್ಕ್ ಯನ್ನು ವಿತರಿಸಲಾಯಿತು. ಕೋವಿಡ್19ನಿಯಂತ್ರಣದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಉತ್ತಮವಾಗಿ ಕ್ರಮ‌ಕೈಕೊಂಡಿದೆ. ಆದರೆ ನಮ್ಮ ಜನರ ಸಹ ಸಹಕಾರ ನೀಡಬೇಕು, ಸಾಮಾಜಿಕ ಅಂತರ ಕಂಡುಕೊಳ್ಳಬೇಕು. ಪ್ರತಿ ಯೊಬ್ಬರು ಮಾಸ್ಕ್ ಹಾಕ ಬೇಕು ಎಂದರು. ಇನ್ನೂ ಬಿಜೆಪಿ ಪಕ್ಷವೂ ಸೀಲ್ ಡೌನ್ ಆಗಿದ್ದ ಸ್ಥಳದಲ್ಲಿರುವ ಜನರಿಗೆ ಅಗತ್ಯ ವಸ್ತುಗಳನ್ನು ನೀಡುತ್ತಾ ಬಂದಿದೆ ಎಂದರು. ಕಾರ್ಯಕ್ರಮದಲ್ಲಿ ಬಿಜೆಪಿ ತಾಲ್ಲೂಕು ಅಧ್ಯಕ್ಷ ಎಂ‌.ಎನ್ ಕೃಷ್ಣ,ಪುರಸಭಾ ಸದಸ್ಯ ರವಿ,ಕೆಸಿ. ನಾಗೇಗೌಡ, ಚೊಟ್ಟನಹಳ್ಳಿ ಶಕ್ತಿ ಕೇಂದ್ರ ಕಾರ್ಯ ದರ್ಶಿ ಲಿಂಗರಾಜು, ಸೇರಿದಂತೆ ಮತ್ತಿತ್ತರರು ಇದ್ದರು ವರದಿ: ಎ.ಎನ್ ಲೋಕೇಶ್