ಮತದಾನದ ಜಾಗೃತಿ ಜಾಥಾ…

282
rtmp://telugusolutions.com:1935/nammurutv/nammurutv

ಮಂಡ್ಯ/ಮಳವಳ್ಳಿ: 2019 ರ ಲೋಕಸಭಾ ಚುನಾವಣೆಯಲ್ಲಿ ಪ್ರತಿಯೊಬ್ಬರು ಮತದಾನ ಮಾಡಬೇಕುಎಂಬ ಉದ್ದೇಶದಿಂದ ಜನರಲ್ಲಿ ಜಾಗೃತಿ ಮೂಡಿಸಲು ತಾಲ್ಲೂಕುಆಡಳಿತ ಹಾಗೂ ಸ್ವೀಫ್ ಸಮಿತಿ ವತಿಯಿಂದ ಮಳವಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಬೈಕ್ ಜಾಥ ನಡೆಸಲಾಯಿತು.

ಮಳವಳ್ಳಿ ಪಟ್ಟಣದ ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ಹಿರಿಯ ಮತದಾರ ಪಟೇಲ್ ಪುಟ್ಟಸ್ವಾಮಿ ರವರಿಂದ ಹಸಿರು ಭಾವುಟ ಮೂಲಕ ಚಾಲನೆ ನೀಡಿದರು.ಇನ್ನೂ ಮತದಾರ ಹೇಗೆ ಮತ ಹಾಕಬೇಕು. ಯಾವರೀತಿ ಮತದಾನ ಮಾಡಬೇಕು ಎನ್ನುವ ಪ್ರಾತ್ಯಕ್ಷಿಕೆ ಮೂಲಕ ಮೆರವಣಿಗೆ ನಡೆಸಲಾಯಿತು.ಇನ್ನೂ ಜಾಥದಲ್ಲಿ ವಿದ್ಯಾ ಪ್ಯಾರಮೆಡಿಕಲ್ ಕಾಲೇಜು ವಿದ್ಯಾರ್ಥಿಗಳು ಜಾಥದಲ್ಲಿ ಪಾಲ್ಗೊಂಡಿದ್ದರು. ಇನ್ನೂ ತಾಲ್ಲೂಕು ಸ್ಟೀಫ್ ಸಮಿತಿ ಅಧ್ಯಕ್ಷ ಹಾಗೂ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಸತೀಸ್ ಮಾತನಾಡಿ, ರಾಜ್ಯದ ಪ್ರತಿಯೊಬ್ಬ ಮತದಾರ ತಮ್ಮ ಹಕ್ಕು ಮತದಾನ ಮಾಡುವ ಮೂಲಕ ಚಲಾಯಿಸಿ ಎಂದು ಅರಿವು ಮೂಡಿಸುವ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿ ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿ ಗಳು ಪಾಲ್ಗೊಂಡಿದ್ದರು. ‌ ಇನ್ನೂ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ನಂತರ ಬಂಡೂರು ಮೂಲಕ ಕಿರುಗಾವಲು ತಲುಪಲಾಗುವುದು ಎಂದರು. ಈ ಸಂದರ್ಭದಲ್ಲಿ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪರಮೇಶ್ , ವಿದ್ಯಾ ಪ್ಯಾರಮೆಡಿಕಲ್ ಕಾಲೇಜು ಪ್ರಾಂಶುಪಾಲ ಚಂದ್ರಮೋಹನ್, ಸೇರಿದಂತೆ ಅಧಿಕಾರಿಗಳು ಇದ್ದಾರೆ