ಮನೆಯ ಬಾಗಿಲಲ್ಲಿ ಶವವಿಟ್ಟು ಪರಾರಿ…!?

156
rtmp://telugusolutions.com:1935/nammurutv/nammurutv

ಮಂಡ್ಯ/ಮಳವಳ್ಳಿ:ಜ್ವರ ಹಾಗೂ ಉಸಿರಾಟ ತೊಂದರೆಯಿಂದ ವ್ಯಕ್ತಿ ಸಾವನ್ನಿಪ್ಪಿದ್ದ ದಾರುಣ ಘಟನೆ ಮಳವಳ್ಳಿ ತಾಲೂಕಿನ ಹೊನಗ ಹಳ್ಳಿ ಗ್ರಾಮದಲ್ಲಿ ನಡೆದಿದೆ.

ಕಳೆದ ರಾತ್ರಿ ಬೆಂಗಳೂರು ನಿಂದ ಬಂದಿದ್ದು,ಜ್ವರ ಹಾಗು ಉಸಿರಾಟ ತೊಂದರೆಯಿಂದ ಬಳಲುತ್ತಿದ್ದ ವ್ಯಕ್ತಿ,ಕೊಳ್ಳೇಗಾಲ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಸಾವನ್ನಪ್ಪಿದ್ದು, ಮೃತ ವ್ಯಕ್ತಿಯ ಶವವನ್ನು
ಹೆಂಡತಿ ಮನೆ ಮುಂದೆ ಅನಾಥವಾಗಿ ಬಿದ್ದದ್ದು, ಬೆಳಿಗ್ಗೆ 9 ಗಂಟೆಯಿಂದ ತಾಲ್ಲೂಕು ಆಡಳಿತ, ಆರೋಗ್ಯ ಇಲಾಖೆಯಾಗಲಿ ಸ್ಥಳಕ್ಕೆ ಭೇಟಿ ನೀಡದೆ ಇರುವುದು ಕಂಡ ಗ್ರಾಮಸ್ಥರು ಆಕ್ರೋಶ ಪಡಿಸಿದ್ದಾರೆ.
ನಂತರ ಸ್ಥಳಕ್ಕೆ ಆರೋಗ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.ಮೃತ ವ್ಯಕ್ತಿ ಟಿ.ನರಸೀಪುರ ತಾಲ್ಲೂಕು ಮುಸುಕಿನಕೊಪ್ಪಲು ಗ್ರಾಮದವರು ಎಂದು ತಿಳಿದುಬಂದಿದ್ದು, ಶವವನ್ನು ಮುಸುಕಿನಕೊಪ್ಪಲು ಗ್ರಾಮಕ್ಕೆ ಸಾಗಿಸಿದ್ದು.ಅಲ್ಲಿಯೇ ಅಂತ್ಯ ಸಂಸ್ಕಾರ ಮಾಡಲಾಗುವುದು

ಆರೋಗ್ಯ ಇಲಾಖೆಯಿಂದ ನಾಳೆ ಹೊನಗಹಳ್ಳಿ ಗ್ರಾಮದಲ್ಲಿ ಕೋವಿಡ್ ಪರೀಕ್ಷೆ ನಡೆಯಲಿದೆ ಎಂದು ಇಲಾಖೆಯ ಮೂಲಗಳು ತಿಳಿಸಿದೆ

ಮನೆಯ ಮುಂದಿದ್ದ ಶವವನ್ನು‌ ಖಾಸಗಿ ವಾಹನದಲ್ಲಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ

ಈ ಘಟನೆಯಿಂದ ಗ್ರಾಮದಲ್ಲಿ ಆತಂಕದ ವಾತಾವರಣ. ಮೂಡಿದೆ

ವರದಿ : ಎ.ಎನ್ ಲೋಕೇಶ್