ರಾಜಕಾಲುವೆಯಲ್ಲಿ ಕೊಚ್ಚಿಹೋಯ್ತಾ ಮಗು…!?

121
rtmp://telugusolutions.com:1935/nammurutv/nammurutv

ಬೆಂಗಳೂರು/ ಮಹದೇವಪುರ:-ಆಟವಾಡುತ್ತಿದ್ದ ವೇಳೆ ರಾಜಕಾಲುವೆಗೆ ಜಾರಿ ಬಿದ್ದು ನೀರಿನಲ್ಲಿ ಮಗುವೊಂದು ಕೊಚ್ಚಿಹೊದ ಘಟನೆ ಮಾರತ್ ಹಳ್ಳಿ ಬಳಿಯ ಮಂತ್ರಿ ಅಪಾರ್ಟ್ಮೆಂಟ್ ಬಳಿ ನಡೆದಿದೆ.

ನಿತ್ಯಾನಂದ ಮೂಲತಃ ಅಸ್ಸಾಂನವರಾಗಿದ್ದು, ಕುಟುಂಬದೊಂದಿಗೆ ಮಾರತಹಳ್ಳಿ ಸಮೀಪದ ಮಂತ್ರಿ ಅಪಾರ್ಟ್​ಮೆಂಟ್​ ಹಿಂಭಾಗದ ಗುಡಿಸಿಲಿನಲ್ಲಿ ವಾಸವಾಗಿದ್ದರು.
ಶುಕ್ರವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಮೊನಾಲಿಕ(6) ರಾಜಕಾಲುವೆ ಪಕ್ಕದಲ್ಲಿ ಆಟವಾಡುತ್ತಿದ್ದಾಗ ಆಯಾತಪ್ಪಿ ಕಾಲುವೆಗೆ ಬಿದ್ದಿದ್ದಾಳೆ. ಕೂಡಲೇ ಮನೆಯವರ ಗಮನಕ್ಕೆ ಬಂದಿದ್ದು ಹುಡುಕಲು ಆರಂಭಿಸಿದರು ಆದರೂ ನೀರಿನ ಹರಿವು ಹೆಚ್ಚಾಗಿದ್ದ ಕಾರಣ
ಬಾಲಕಿ ಕೊಚ್ಚಿ ಹೋಗಿದ್ದಾಳೆ ಎನ್ನಲಾಗಿದೆ.

ನೀರಿನ ಮೇಲ್ಬಾಗದಲ್ಲಿ ಕಸ ಮತ್ತು ಹುಲ್ಲು ಹೆಚ್ಚಾಗಿರುವ ಕಾರಣ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿ ಆಗುತ್ತಿದೆ.
ರಾಜಕಾಲುವೆ 15 ಅಡಿ ಆಳದಲ್ಲಿ ವೇಗವಾಗಿ ನೀರು ಹರಿಯುತ್ತಿದೆ, ಹೀಗಾಗಿ 100 ಮೀಟರ್ ಗೂ ಹೆಚ್ಚು ದೂರ ಕೊಚ್ಚಿ ಹೋಗಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಯಾರೂ ರಾಜಕಾಲುವೆ ಬಳಿ ಬರದಂತೆ ಕಂಬಿ ಬೇಲಿ ಹಾಕಿದ್ರೂ ವಲಸೆ ಕಾರ್ಮಿಕರು ಕಿತ್ತಾಕಿ ದಾರಿ ಮಾಡಿಕೊಂಡಿದ್ದರು ಎಂದು ಹೇಳ ಲಾಗುತ್ತದೆ.

ಪೋಷಕರು ನಿರ್ಲಕ್ಷ್ಯ ವಹಿಸಿದ್ದರಿಂದ‌ ಹಾಗೂ ಸ್ಥಳೀಯ ವಾಸಿಗಳ ಬೇಜವ್ದಾರಿತನದಿಂದ ಈ ಘಟನೆ ನಡೆದಿದೆ ಎಂದು ಸ್ಥಳೀಯರು ಆರೋಪಿಸಿದರು.

ಮಗುವಿನ ಹುಡುಕಾಟ ರಾತ್ರಿ ವರಗೆ ನಡೆದಿದ್ದು ಕತ್ತಲಾದ ಕಾರಣ ರಕ್ಷಣಾ ಕಾರ್ಯಾಚರಣೆ ಬೆಳಗ್ಗೆ ನಡೆಸುತ್ತೆವೆ ಎಂದು ಅಗ್ನಿಶಾಮಕ ದಳ ಅಧಿಕಾರಿಗಳು ತಿಳಿಸಿದ್ದಾರೆ.