ಅಂಬ್ಯುಲೇನ್ಸ್ ಇಲ್ಲದೆ ರೋಗಿಗಳ ಪರದಾಟ.

354

ಕೊಪ್ಪಳ;ಜಿಲ್ಲಾಸ್ಪತ್ರೆಯಲ್ಲೊಂದು ಅಮಾನವೀಯ ಘಟನೆ.ಕಳೆದ ಮೂರು ಗಂಟೆಗಳಿಂದ ಅಂಬ್ಯುಲೇನ್ಸ್ ಇಲ್ಲದೆ ರೋಗಿಯ ಪರದಾಟ.ಆಸ್ಪತ್ರೆ ಮುಂದೆ ಮೂರು ಗಂಟೆಗಳಿಂದ ಮಲಗಿರುವ ರೋಗಿ ಗವಿಸಿದ್ದಯ್ಯ ಹಿರೇಮಠ.ಗವಿಸಿದ್ದಯ್ಯ ಹಿರೇಮಠ ಕುಣಕೇರಿ ಗ್ರಾಮಸ್ಥ.ನಿನ್ನೆ ಬೆಳಿಗ್ಗೆ ಕುಣಕೇರಿ ತಾಂಡಾ ಬಳಿ ಬೈಕ್ ಅಪಘಾತವಾಗಿತ್ತು.ಬಳಿಕ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗೆಂದು ದಾಖಲಾಗಿದ್ದರುಇಂದು ಬೆಳಿಗ್ಗೆ ಸ್ಕ್ಯಾನ್ ಗೆ ಖಾಸಗಿ ವಾಹನದಲ್ಲಿ ಹೋಗಿದ್ದರು.ಸ್ಕ್ಯಾನ್ ಬಳಿಕ ವೈದ್ಯರು ಹೆಚ್ಚಿನ ಚಿಕಿತ್ಸೆಗೆಂದು ಧಾರವಾಡದ ಎಸ್ ಡಿ ಎಂ ಆಸ್ಪತ್ರೆಗೆ ತೆರಳಲು ಸೂಚಿಸಿದ್ದರು.ಆದ್ರೆ ಅಂಬ್ಯುಲೇನ್ಸ್ ನವರಿಗೆ ಕರೆ ಮಾಡಿದರೂ ಮೂರು ಗಂಟೆಗಳಾದರೂ ಬಂದಿಲ್ಲ.ಫೋನ್ ಕರೆ ಸ್ವೀಕರಿಸದ ಅಂಬ್ಯುಲೇನ್ಸ್ ಸಿಬ್ಬಂದಿ.ಆಸ್ಪತ್ರೆಯ ವೈದ್ಯರಿಗೂ ಹೇಳಿದರೂ ನಿರ್ಲಕ್ಷ್ಯ.ಅಂಬ್ಯುಲೇನ್ಸ್ ಬರದ ಹಿನ್ನಲೆಯಲ್ಲಿ ಆಸ್ಪತ್ರೆ ಮುಂದೆ ಮಲಗಿದ ರೋಗಿ ಗವಿಸಿದ್ದಯ್ಯ.ಜಿಲ್ಲಾಸ್ಪತ್ರೆಯ ವೈದ್ಯರ ಹಾಗೂ ಅಂಬ್ಯೂಲೇನ್ಸ್ ಸಿಬ್ಬಂದಿ ವಿರುದ್ಧ ರೋಗಿಯ ಸಂಬಂಧಿಕರ ಆಕ್ರೋಶ