ಆಸ್ತಿ ಗಾಗಿ ತಾಯಿಮಕ್ಕಳನ್ನು ಬೀದಿಗಟ್ಟಿದ ಸಂಬಂಧಿಕರು

280

ಬಳ್ಳಾರಿ: ಯೋವೃದ್ಧೆ ಎಸ್.ಮಂಗಮ್ಮ. (76) ಅವರ ಪುತ್ರಿಯರು ಎಸ್.ಚಂದ್ರಕಲಾ (45)ಮತ್ತು ಎಸ್.ಸೂರ್ಯಕಲಾ. ಇವರು ತಮ್ಮವರಿಂದಾಗಿ ಇದೀಗ ಬೀದಿ ಪಾಲಾಗಿದ್ದಾರೆ. ಅಂಥಹ ಮಹಿಳೆಯರನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಬಿ.ಎಸ್.ಕಲಾದಗಿ ಮಹಿಳೆಯರೊಂದಿಗೆ ಚರ್ಚೆ ಮಾಡಿ ಧೈರ್ಯ ತುಂಬಿದರು. ಮಹಿಳಾ ಸಾಂತ್ವನ ಕೇಂದ್ರದ ಸಮಾಲೋಚನಾಧಿಕಾರಿ ಕಲಾವತಿ ಅವರು ಇವರಿಂದ ಮನೆಯಿಂದ ಹೊರ ಹಾಕಿದ ಕುರಿತು ಮಾಹಿತಿ ಪಡೆದರು. ವಯೋವೃದ್ಧೆ ಎಸ್.ಮಂಗಮ್(76 ಮತ್ತು ತನ್ನಿಬ್ಬರು ಹೆಣ್ಣುಮಕ್ಕಳಾದ ಎಸ್.ಚಂದ್ರಕಲಾ ಮತ್ತು ಎಸ್.ಸೂರ್ಯಕಲಾ ಅವರೊಂದಿಗೆ ಅಕ್ಷರಶಃ ಬೀದಿ ಪಾಲಾಗಿದ್ರು. ಅವರ ಬಳಿ ಇದ್ದ ಕೋಟ್ಯಾಂತರ ಮೌಲ್ಯದ ಆಸ್ತಿಗಾಗಿ ಅವರ ಸಂಬಂಧಿಕರೇ ವೃದ್ಧೆಯೊಂದಿಗೆ ಇಬ್ಬರು ಮಹಿಳೆಯರನ್ನು ಹೊರಹಾಕಲಾಗಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ವಿ.ಎಸ್.ಕಲಾದಗಿ ಹಾಗೂ ಸಾಂತ್ವನ ಸಂಸ್ಥೆಯ ಆಪ್ತ ಸಮಾಲೋಚಕಿ ಕಲಾವತಿ ಅವರು ಸ್ಥಳಕ್ಕೆ ಭೇಟಿ ನೀಡಿ ಸಂತ್ರಸ್ಥ ಮಹಿಳೆಯರಿಂದ ವರದಿ ಪಡೆದ್ರು. ತಾಳೂರು ರಸ್ತೆಯಲ್ಲಿರುವ ಸರ್ವೆ ನಂಬರ್ 60ರಲ್ಲಿ ಇವರಿಗೆ ಸೇರಿದ್ದನೆನ್ನಲಾದ ಕೋಟ್ಯಾಂತರ ಮೌಲ್ಯದ ಆಸ್ತಿ ಇದೆ. ಇದನ್ನು ಪಡೆಯಲು ಸಂಬಂಧಿಕರೇ ತಮ್ಮನ್ನು ಮನೆಯಿಂದ ಹೊರ ಹಾಕಿದ್ದಾರೆ ಎಂದು ವೃದ್ಧೆ ಎಸ್.ಮಂಗಮ್ಮ ಅಧಿಕಾರಿಗಳಿಗೆ ಮಾಹಿತಿ ನೀಡಿದ್ರು. ಸಂತ್ರಸ್ಥ ಮಹಿಳೆಯರಿಂದ ಮಾಹಿತಿ ಪಡೆದ ಅಧಿಕಾರಿಗಳು ವಿವರಣೆಯನ್ನು ಆಧರಿಸಿ ಮುಂದಿನ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ರು. ಅಲ್ಲದೆ, ಆಸ್ತಿಗೆ ಸಂಬಂಧಿಸಿದ ವಿವರಗಳ ಕುರಿತು ವಕೀಲರೊಂದಿಗೆ ಕೂಡ ಮೊಬೈಲ್ ಮೂಲಕ ಚರ್ಚಿಸಿದ್ರು. ಇದೀಗ ವೃದ್ಧೆ ಮಂಗಮ್ಮ ತನ್ನವರಿಂದಲೇ ತಾವು ಹೀಗೆ ಬೀದಿಗೆ ಬರುವಂತಾಗಿದೆ. ಎಲ್ಲರೂ ಸೇರಿ ತಮ್ಮನ್ನು ಅನ್ಯಾಯ ಮಾಡಿದ್ದಾರೆ. ನಮಗೆ ನ್ಯಾಯ ಒದಗಿಸಿಕೊಡಿ ಅಂತ ಮಾಧ್ಯಮದವರಿಗೆ ತಿಳಿಸಿದ್ರು. ಇವರ ಆಸ್ತಿಯ ವಿಷಯ ಏನಾದ್ರೂ ಇರಲಿ, ಹೀಗೆ, ಬಿಸಿಲು-ಹಗಲು-ರಾತ್ರಿ ಯೆನ್ನದೇ ವೃದ್ಧೆ ಹಾಗೂ ಇಬ್ಬರು ಹೆಣ್ಣು ಮಕ್ಕಳು ಹೀಗೆ ಬೀದಿಯಲ್ಲಿ ವಾಸ ಮಾಡಿಕೊಂಡಿರುವುದು ಸರಿಯೇ? ಎಂಬ ಪ್ರಶ್ನೆ ಪ್ರಜ್ಞಾವಂತರನ್ನು ಕಾಡುತ್ತಿದೆ.