ಉಚಿತ ಆರೋಗ್ಯ ತಪಾಸಣಾ ಶಿಬಿರ.

267

ಕೋಲಾರ/ ಶ್ರೀನಿವಾಸಪುರ ನಗರದ ಸರ್ಕಾರಿ ಉರ್ದು ಬಾಲಕರ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಫಲಾಹೆ ಉಮ್ಮತ್ ಫೌಂಡೇಷನ್ ಇವರ ಸಂಯುಕ್ತಾಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣೆ ಮತ್ತು ರಕ್ತದಾನ ಶಿಬಿರವನ್ನು ಹಮ್ಮಿಕೋಳ್ಳಾಗಿತ್ತು .

ಈ ಸಂದರ್ಭದಲ್ಲಿ ಫಲಾಹೆ ಉಮ್ಮತ್ ಫೌಂಡೆಷನ್ ಅಧ್ಯಕ್ಷ ಆಬೀದ್ ಅನ್ಸಾರಿ ಮತ್ತು ಉಪಾಧ್ಯಕ್ಷ ಟಿ.ಎ.ಕೆ ಅಯಾಜ್ ಅಹ್ಮದ್ ಮಾತನಾಡಿ ಶ್ರೀನಿವಾಸಪುರ ತಾಲೂಕಿನ ಸಾರ್ವಜನಿಕರಿಗೆ ಶಿಬಿರದಲ್ಲಿ ಹೃದಯ ತಪಾಸಣೆ , ಕಿಡ್ನಿ ,ಕ್ಯಾನ್ಸರ್, ಕಣ್ಣಿನ ಪರೀಕ್ಷೆ ಸೇರಿದಂತೆ ಹಲವಾರು ಕಾಯಿಲೆಗಳ ತಪಾಸಣೆ ನಡೆಸಿ ಔಷದಿಗಳು ನೀಡಿ ಅವಶ್ಯಕತೆ ಇದ್ದಲ್ಲಿ ಫಲಾಹೆ ಉಮ್ಮತ್ ಫೌಂಡೇಷನ್ ವತಿಯಿಂದ ರೋಗಿಗಳಿಗೆ ಹೆಚ್ಚಿನ ಚಿಕಿತ್ಸೆಗಾಗಿ ಸಹಾಯ, ಧನವನ್ನು ನಿಡಲಾಗುತ್ತದೆ ಎಂದರು .

ಸಪ್ತಗಿರಿ ಆಸ್ಪತ್ರೆಯ ಬೆಂಗಳೂರು ಮತ್ತು ಕೋಲಾರ ಆರ್ ಎಲ್ ಜಾಲಪ್ಪ ಆಸ್ಪತ್ರೆಯ ವೈದ್ಯಯರು ತಪಾಸಣೆ ನಡೆಸಿದರು.

ಆರೋಗ್ಯ ತಪಾಸಣೆ ಶಿಬಿರದಲ್ಲಿ ಚಿಕಿತ್ಸೆಯನ್ನು ನೀಡಿದ ವೈದ್ಯಯರಿಗೆ ಫೌಂಡೇಷನ್ ವತಿಯಿಂದ ಸನ್ಮಾನ ಮಾಡಲಾಯಿತು.

ಈ ಸಂದರ್ಭದಲ್ಲಿ ಕಾರ್ಯದರ್ಶಿ ಅಯಾಜ್ ಪಾಷ , ಜುಬೇರ್ ಪಾಷ , ಮುಜೀರ್ ಬರೀದ್, ಮುಜಾಹಿದ್ , ಸಾಧಿಕ್ ಪಾಷ , ಇಕ್ರಮ್ , ಬಾಜಿ , ಶಬ್ಬೀರ್ ಪಾಷ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.