ಕಪ್ಪು ಪಟ್ಟಿ ದರಿಸಿ ಪ್ರತಿಭಟನೆ…

198

ಬೆಂಗಳೂರು/ಮಹದೇವಪುರ : ರೈತರ ಸಾಲಮನ್ನಾಕ್ಕೆ ಒತ್ತಾಯಿಸಿ ಬಿಜೆಪಯಿಂದ ರಾಜ್ಯ ಬಂದ್ ಕರೆ ಹಿನ್ನೆಲೆ ಹೊಸಕೋಟೆ ಕ್ಷೇತ್ರದಲ್ಲಿ ಮಾಜಿ ಸಚಿವ ಬಿಎನ್.ಬಚ್ಚೇಗೌಡ, ಪರಾಜಿತ ಅಭ್ಯರ್ಥಿ ಶರತ್ ಬಚ್ಚೇಗೌಡ ನೇತೃತ್ವದಲ್ಲಿ ಪ್ರತಿಭಟನೆ ಮಾಡಿದರು.
ನೂರಾರು ಸಂಖ್ಯೆಯಲ್ಲಿ ನೆರದ ಕಾರ್ಯಕರ್ತರು ಕೈಗೆ ಕಪ್ಪು ಬಟ್ಟೆ ದರಿಸಿ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ರೈತರ ಸಂಪೂರ್ಣ ಸಾಲಮನ್ನ ಮಾಡುವುದಾಗಿ ಹೇಳಿದ್ದ ಕುಮಾರಸ್ವಾಮಿ ಮಾತಿಗೆ ತಪ್ಪಿದ್ದಾರೆ ಎಂದು ದೂರಿದರು.
ಶೀಘ್ರ ಸಾಲಮನ್ನಾ ಮಾಡದಿದ್ದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ನೇತೃತ್ವದಲ್ಲಿ ಉಗ್ರ ಪ್ರತಿಭಟನೆ ನಡೆಸಲಿದ್ದೇವೆ ಎಂದು ಬಿ.ಎನ್.ಬಚ್ಚೇಗೌಡ ಹೇಳಿಕೆ ನೀಡಿದರು.
ಸಂಪುಟ ರಚನೆಯಲ್ಲೇ ಮೈತ್ರಿ ಸರ್ಕಾರ ಅಸ್ತಿತ್ವ ಕಳೆದುಕೊಳ್ಳುತ್ತಿದೆ ದುರ್ಬಲ ಸರ್ಕಾರ ರಚನೆ ಗೊಂಡಿದ್ದು ಶೀಘ್ರವೇ ಮುರಿದು ಬೀಳಲಿದೆ ಎಂದು ವ್ಯಂಗ್ಯ ಮಾಡಿದರು.
ಈದೇ ಸಂದರ್ಭದಲ್ಲಿ ಮುಖಂಡರು ಚಿಕ್ಕಹುಲ್ಲುರು ಮಂಜುನಾಥ್, ಜಯರಾಜ್, ಅನುಗೊಂಡನಹಳ್ಳಿ ಮುನಿರಾಜು ಸೇರಿದಂತೆ ನೂರಾರು ಹಾಜರಿದ್ದರು.