ಕುಖ್ಯಾತ ಮನೆಗಳ್ಳರ ಬಂಧನ,ಲಕ್ಷಾಂತರ ಮೌಲ್ಯದ ಚಿನ್ನಾಭರಣ ವಶ

884

ಬೆಂ‌ಗಳೂರು ಗ್ರಾಮಾಂತರ/ ದೊಡ್ಡಬಳ್ಳಾಪುರ:‌ ನಗರ ಪೊಲೀಸ್ ಠಾಣೆಯಲ್ಲಿ ಆರೋಪಿಗಳಾದ ನಗರದ ಮುತ್ತೂರು ನಿವಾಸಿ ಕೆಂಚಪ್ಪ @ಕೃಷ್ಣ@ ಕೆಂಚ (32) ಮತ್ತು ಕಗ್ಗಲೀಪುರ ಠಾಣಾ ವ್ಯಾಪ್ತಿಯ ಕೊಲೆ ಪ್ರಕರಣದ ಆರೋಪಿ ನಿಖಿಲ್ (24) ಎಂಬ ಆರೋಪಿಗಳು ಕುಖ್ಯಾತ ಮನೆಗಳ್ಳ ಕೊಮ್ಮಗಟ್ಟ ಮಂಜುನಾಥ@ ಮಂಜನ ಜೊತೆಸೇರಿ ಕಳದೆ ತಿಂಗಳ 6 ನೇ ತಾರಿಖು
ಬೆಂಗಳೂರು ನಗರ ಪಶ್ಚಿಮ ವಿಭಾಗದ ಬ್ಯಾಟರಾಯಪುರದ ಟೆಲಿಕಾಮ್ ಲೇ ಔಟ್ ನ ಮನೆಯೊಂದರ ಬೀಗ ಮುರಿದು ಕಳ್ಳತನ ಮಾಡಲಾಗಿದ್ದ ಸುಮಾರು 634 ಗ್ರಾಂ, ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ..

ಕದ್ದ ಒಡವೆಗಳನ್ನು ವಿವಿಧ ನಗರಗಳಲ್ಲಿ ಅಡಮಾನ ಮಾಡಿರುವುದಾಗಿ ವಿಚಾರಣೆ ವೇಳೆ
ಕುಖ್ಯಾತ ಮನೆ ಕಳ್ಳ ಕೊಮ್ಮಗುಟ್ಟ ಮಂಜನ ಇಬ್ಬರು ಸಹಚರರು ಒಪ್ಪಿಕೊಂಡ ಹಿನ್ನಲೆ ಯಲ್ಲಿ ಆರೋಪಿಗಳು ಆಡಮಾನವಿಟ್ಟಿದ್ದ ಸುಮಾರು 15.60.000 ರೂ, ಬೆಲೆಯ ಚಿನ್ನಾಭರಣ ವಶಪಡೆಸಿಕೊಂಡಿದ್ದಾರೆ.

ಡಿವೈಎಸ್ಪಿ ಆರ್.ಮೋಹನ್ ಕುಮಾರ್ ಮಾರ್ಗದರ್ಶನದಲ್ಲಿ ಪ್ರಕರಣ ಭೇದಿಸಿದ ಸಿಪಿಐ ಜಿ,ಸಿದ್ದರಾಜು,ನಗರಠಾಣೆಯ ಪಿಎಸ್ಐ. ವೆಂಕಟೇಶ್, ರಂಗನಾಥ್,ಸಿಬ್ಬಂದಿ ವೀರಭದ್ರ, ಶಶಿಧರ್,ಕುಮಾರ್, ಮುತ್ತುರಾಜು, ಪಾಂಡುರಂಗ, ಶಿವರಾಜಯ್ಯ,ಫೈರೋಜ್ ಮತ್ತು ಪ್ರಕಾಶ್ ರ ಕಾರ್ಯವನ್ನು ಮೆಚ್ಚಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ಅಧೀಕ್ಷಕರು ರಾಮ್ ನಿವಾಸ್ ಸೆಪಟ್ ಶ್ಲಾಘಿಸಿ ಬಹುಮಾನ ಘೋಷಿಸಿದ್ದಾರೆ.