ಲೋಕಾಯುಕ್ತರಿಂದ ಕೆರೆ ಪರಿಶೀಲನೆ.

307

ಬೆಂಗಳೂರು/ಕೆ.ಆರ್.ಪುರ:- ಬೆಳ್ಳಂದೂರು ಹಾಗೂ ವರ್ತೂರು ಕೆರೆ ನಂತರ ವಿಭೂತಿ ಪುರ ಕೆರೆಗೆ ಇಂದು ಲೋಕಾಯುಕ್ತರ ಬೇಟಿ ನೀಡಿ ಪರಿಶೀಲನೆ ನಡೆಸಿ ಕೆರೆ ಅಭಿವೃದ್ಧಿಗೆ ಮುಂದಾಗಿದ್ದಾರೆ.

ಕೆಲ ಪ್ರಭಾವಿಗಳು ಕೆರೆಗೆ ತ್ಯಾಜ್ಯ ಸುರಿಯುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದ ಹಿನ್ನಲೆಯಲ್ಲಿ ಇಂದು ಬೆಳ್ಳಂಬೆಳಗ್ಗೆ ವಿಭೂತಿಪುರ ಕೆರೆಗೆ ಬೇಟಿ ನೀಡಿದ ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ ಶೆಟ್ಟಿ ಸಾರ್ವಜನಿಕರಿಂದ ದೂರುಗಳನ್ನು ಹಾಲಿಸಿದರು.
ಕೆರೆಗೆ ಬಿಡಿಎ ವತಿಯಿಂದ ಅಳವಡಿಸಿದ್ದ ಗೇಟ್ ಒಡೆದು, ಕೆರೆಗೆ ಅಕ್ರಮವಾಗಿ ನಂಬರ್ ಪ್ಲೇಟ್ ಇಲ್ಲದ ಲಾರಿ ಮತ್ತು ಟ್ರಾಕ್ಟರ್ ಗಳಿಂದ ಕಸ ತಂದು ಸುರಿಯುತ್ತಿರುವುದರ ಬಗ್ಗೆ ಬಿಬಿಎಂಪಿ ಅಧಿಕಾರಿಗಳಿಗೆ ದೂರು ನೀಡಿದರು ಯಾವುದೆ ಕ್ರಮ ಕೈಗೊಳ್ಳುತ್ತಿಲ್ಲವೆಂದು ಸ್ಥಳಿಯರ ಅಕ್ರೋಶ ವ್ಯಕ್ತಪಡಿಸಿದ್ದು, ಕೆರೆಯನ್ನು ಕಲುಷಿತ ಗೊಳಿಸುತ್ತಿರುವ ವ್ಯಕ್ತಿಗಳಿಗೆ ದಂಡ ವಿದಿಸುವಂತೆ ಬಿಬಿಎಂಪಿ ಅಧಿಕಾರಿಗಳಿಗೆ ಸೂಚಿಸಿದ್ದು, ಕೆರೆಯ ಅಭಿವೃದ್ಧಿ ಸಂಬಂದ ಚರ್ಚಿಸಲು ಇದೇ ತಿಂಗಳ ೧೯ ರಂದು ಸಭೆ ಕರೆದಿರುವುದಾಗಿ ತಿಳಿಸಿದ್ದಾರೆ.

ಬೈಟ್: ವಿಶ್ವನಾಥ ಶೆಟ್ಟಿ, ಲೋಕಾಯುಕ್ತ ನ್ಯಾಯಮೂರ್ತಿ.