ಖಾಸಗಿಶಾಲೆಯವರೊಂದಿಗೆ ಸಮಾಲೋಚನೆ ಸಭೆ

334

ಚಿಕ್ಕಬಳ್ಳಾಪುರ/ಶಿಡ್ಲಘಟ್ಟ : ಏಪ್ರಿಲ್ 30 ರ ಒಳಗೆ ಎಲ್ಲಾ ಖಾಸಗಿ ಮತ್ತು ಅನುದಾನ ರಹಿತ ಶಾಲೆಗಳಲ್ಲಿ ವಿದ್ಯಾಥಿ೯ಗಳ ಭೋದನಾ ಶುಲ್ಕ ವನ್ನು ಖಡ್ಡಾಯವಾಗಿ ಶಾಲೆಯ ನೋಟಿಸ್ ಬೋಡ್೯ ಮತ್ತು ಶಾಲೆಯ ಮುಂದೆ ಪ್ಲಕ್ಸ್ ಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಪ್ರಕಟಿಸಬೇಕು ಎಂದು ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ರಘುನಾಥ ರೆಡ್ಡಿ ಆದೇಶಿಸಿದ್ದಾರೆ.

ನಗರದ ಸಕಾ೯ರಿ ಪದವಿ ಪೂವ೯ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಖಾಸಗಿ ಶಾಲೆಗಳ ಅಧ್ಯಕ್ಷ, ಕಾಯ೯ದಶಿ೯ಗಳು, ಹಾಗೂ ಮುಖ್ಯ ಶಿಕ್ಷಕರ ಸಮಾಲೋಚನೆ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಪೋಷಕರಿಂದ ದೂರುಗಳು ಸುರಿಮಳೆ ಹರಿದು ಬರುತ್ತಿರುವ ಹಿನ್ನಲೆಯಲ್ಲಿ ಶಿಕ್ಷಕರಾದ ನೀವು ತರಗತಿವಾರು , ಬೋಧನ ಶುಲ್ಕ ಪ್ರಕಟಿಸುವುದು ಅನಿವಾಯ೯ವಾಗಿದೆ.

ಬೋಧನೆ , ಬೋಧಕೇತರ ಸಿಬ್ಬಂದಿ , ಜೊತೆಗೆ ನಿವ೯ಹಣಾ ವೆಚ್ಚ ಕೇವಲ ಶೇ 30% ತೆಗೆದು ಕೊಳ್ಳಬೇಕು , ಆದರೆ ಕೆಲವು ಖಾಸಗಿ ಶಾಲೆಗಳು ಲಂಗು ಲಗಾಮು ಇಲ್ಲದೆ ದುಬಾರಿ ಶುಲ್ಕ ಪಡೆಯುತ್ತಿರುವ ಕಡಿವಾಣವಾಕಲಾಗುತ್ತದೆ. ಅಂತಹ ಶಾಲೆಗಳ ಮೇಲೆ ಶಿಸ್ತಿನ ಕ್ರಮ ಕೈಗೊಳ್ಳಲಾಗುತ್ತದೆ. ಸಕಾ೯ರದ ನಿಯಮನುಸಾರವಾಗಿ ಶುಲ್ಕ ತೆಗೆದು ಕೊಳ್ಳಬೇಕು. 2017-18 ಸಾಲಿನಲ್ಲಿ ಯಾವುದೇ ಅಡೆತಡೆಗಳು ಆಗದ ಹಾಗೇ ಆಡಳಿತ ಮಂಡಳಿ ಗಮನ ನೀಡಬೇಕು ಎಂದರು.

ಕಾಯ೯ಕ್ರಮದಲ್ಲಿ ಇಸಿಓ ಲಕ್ಷ್ಮಿನರಸಿಂಹ ಗೌಡ , ಬೈರಪ್ಪ,ಆರ್.ಟಿ.ಇ. ನೋಡಲ್  ಅಧಿಕಾರಿ ಪ್ರಸನ್ನಕುಮಾರ್. ತಾಲ್ಲೂಕಿನ ಶಾಲಾ ಶಿಕ್ಷಕರು, ಶಾಲಾ ಆಡಳಿತ ಮಂಡಳಿ ಅಧ್ಯಕ್ಷರು, ಕಾಯ೯ದಶಿ೯ಗಳು ಹಾಜರಿದ್ದರು