ಗ್ರಾಮದೇವತೆ ಮುತ್ಯಾಲಮ್ಮ ತಾಯಿ ಜಾತ್ರಾಮಹೋತ್ಸವ

639

ಬೆಂಗಳೂರು ಗ್ರಾಮಾಂತರ/ ದೊಡ್ಡಬಳ್ಳಾಪುರ: ನಮ್ಮೂರು ಗ್ರಾಮದೇವತೆ ಮುತ್ಯಾಲಮ್ಮ ತಾಯಿಯ ವಿಜೃಂಭಣೆಯ ಜಾತ್ರಾಮಹೋತ್ಸವ ನಡೆಯಿತು.

ನೂರಾರು ವರ್ಷಗಳ ಇತಿಹಾಸ ಹೊಂದಿರತಕ್ಕಂಥಹ ದೊಡ್ಡಬಳ್ಳಾಪುರ ಗ್ರಾಮದೇವತೆಯ ಜಾತ್ರಾ ಮಹೋತ್ಸವದಲ್ಲಿ ತಾಲೂಕಿನ ಸಾವಿರಾರು ಸಂಖ್ಯೆಯ ಭಕ್ತಾಧಿಗಳು ಭಾಗವಹಿಸಿ ತಾಯಿಯ ಕೃಪೆಗೆ ಪಾತ್ರರಾದರು.

ವಾಡಿಕೆಯಂತೆ ಇಲ್ಲಿನ ನಾಗಸಂದ್ರ,ದರ್ಗಾಜೋಗಿ ಹಳ್ಳಿ ಕೊಡಿಗೆಹಳ್ಳಿ, ಕುರುಬರಹಳ್ಳಿ ಸಿದ್ದೇನಾಯಕನ ಹಳ್ಳಿ,ಗಂಗಾಧರ ಪುರ,ಮತ್ತು ರೋಜಿಪುರ ಸೇರಿದಂತೆ ಏಳು ಗ್ರಾಮಗಳ ಮುತ್ತೈದೆಯರು ಆರತಿ ಹೊತ್ತುತಂದು ಮುತ್ಯಾಲಮ್ಮ ತಾಯಿಗೆ ಬೆಳಗಿ ತಮ್ಮ ಭಕ್ತಿಯನ್ನು ಮೆರೆದರು ಪುನೀತರಾದರು.

ತಾಯಿಯ ಉತ್ಸವ ಮೂರ್ತಿಯು ಮೆರವಣಿಗೆ ಮೂಲಕ ಸಾಗಿದಾಗ ವಿವಿಧ ಕಲಾ ತಂಡಗಳಿಂದ ನೃತ್ಯ ರೂಪಕಗಳು ಮತ್ತು ಡೊಳ್ಳುಕುಣಿತ ವೀರಗಾಸೆ ಮುಂತಾದವು ಜನಾಕರ್ಷಕವಾಗಿದ್ದವು ವಿಷೇಷವಾಗಿ ಮಹಿಳಾ ನೃತ್ಯತಂಡಗಳ ಕುಣಿತ ಜನಾಕರ್ಷವಾಗಿತ್ತು ಮತ್ತು ಜನಮನ್ನಣೆ ಗಳಿಸಿತು.