ಜಿಲ್ಲಾಧಿಕಾರಿಗಳ ಕಛೇರಿ ಎದುರು ಪ್ರತಿಭಟನೆ…

852

ಕೋಲಾರ:ಸರ್ಕಾರಿ ಗುತ್ತಿಗೆ ಕಾಮಗಾರಿಗಳಲ್ಲಿನ ಮೀಸಲಾತಿಯನ್ನು ಅಧಿಕಾರಿಗಳು ಒದಗಿಸಲು ಅನ್ಯಾಯವೆಸಗಿದ್ದಾರೆಂದು ಆರೋಪಿಸಿ ಕೋಲಾರದಲ್ಲಿ ಜಿಲ್ಲಾ ಎಸ್‌ಸಿ ಎಸ್‌ಟಿ ಗುತ್ತಿಗೆದಾರರ ಸಂಘ ಪ್ರತಿಭಟನೆ ನಡೆಸಿತು.

ಕೋಲಾರ ಜಿಲ್ಲಾಧಿಕಾರಿಗಳ ಕಛೇರಿ ಎದುರು ಪ್ರತಿಭಟನೆ ನಡೆಸಿ ಸರ್ಕಾರ ಜಾರಿಗೆ ತಂದಿರುವ ಗುತ್ತಿಗೆಯಲ್ಲಿನ ಮೀಸಲಾಗಿ ಕಲ್ಪಿಸುವಲ್ಲಿ ಇಲಾಖಾಧಿಕಾರಿಗಳು ಕಡೆಗಣಿಸಿದ್ದಾರೆಂದು ಆರೋಪಿಸಿದ್ರು. ಜಿಲ್ಲೆಯಲ್ಲಿ ಈವರೆಗೆ ೧೨೦ ಕೋಟಿ ರೂ. ಗಳಷ್ಟು ಕಾಮಗಾರಿಗಳು ಮಂಜೂರಾಗಿವೆ, ಆದ್ರೆ ಅದ್ರಲ್ಲಿ ಎಸ್‌ಸಿ ಎಸ್‌ಟಿ ಗುತ್ತಿಗೆದಾರರಿಗೆ ಕಲ್ಪಿಸಬೇಕಿದ್ದ ೩೦ ಕೋಟಿ ವೆಚ್ಚದ ಕಾಮಗಾರಿಗಳನ್ನು ನೀಡಿಲ್ಲ. ಅದ್ರಲ್ಲಿ ಕೇವಲ ೧೦ ಕೋಟಿ ರೂ. ನಷ್ಟು ಗುತ್ತಿಗೆ ಮಾತ್ರ ಕಲ್ಪಿಸಿದ್ದು ಇದ್ರಲ್ಲಿ ಜನಪ್ರತಿನಿಧಿಗಳು ಸೇರಿದಂತೆ ಅಧಿಕಾರಿಗಳು ವಂಚನೆ ಮಾಡಿದ್ದಾರೆಂದು ದೂರಿದ್ರು. ಕೂಡಲೇ ರಾಜ್ಯ ಸರ್ಕಾರ ಮಧ್ಯಪ್ರವೇಶಿಸಿ ಅನ್ಯಾಯವೆಸಗಿದವ್ರ ವಿರುದ್ಧ ಪ್ರಕರಣ ದಾಖಲು ಮಾಡಿ ಕ್ರಮ ಜರುಗಿಸಲು ಒತ್ತಾಯಿಸಿದ್ರು.

 

ಬೈಟ್ ೧ – ಬಾಬು (ಗುತ್ತಿಗೆದಾರ)