ಡೆಂಗ್ಯು ಜ್ವರ ಜಾಗೃತಿ ಶಿಬಿರ

354

ಬಳ್ಳಾರಿ/ಹೊಸಪೇಟೆ:ಡೆಂಗ್ಯು ಜ್ವರ ನಿಯಂತ್ರಣ ಕುರಿತು ಜಾಗೃತಿ ಶಿಬಿರ ಹಾಗೂ ತಪಾಸಣಾ ಶಿಬಿರ ತಾಲೂಕಿನ ನಾಗೇನಹಳ್ಳಿ ಗ್ರಾಮದಲ್ಲಿ ಶುಕ್ರವಾರ ಜರುಗಿತು.
ತಾಲೂಕಿನ ನಾಗೇನಹಳ್ಳಿ ಗ್ರಾಮದ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಆಯುಷ್ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಶಿಬಿರದಲ್ಲಿ ಮಾತನಾಡಿದ ತಾಲೂಕು ಆಯುಷ್ ನೋಡಲ್ ಅಧಿಕಾರಿ ಡಾ.ರೂಪ್ ಸಿಂಗ್ ರಾಥೋಡ್, ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದರಿಂದ, ಸೊಳ್ಳೆ ಪರದೆಯನ್ನು ಉಪಯೋಗಿಸುವುದರಿಂದ ಮತ್ತು ಬೇವಿನ ಎಲೆಗಳ ದೂಪ ಹಾಕುವುದರಿಂದ ಡೆಂಗ್ಯು ಜ್ವರವನ್ನು ನಿಯಂತ್ರಿಸಬಹುದು ಎಂದು ಹೇಳಿದರು.
ಶಿಬಿರದ 500ಕ್ಕೂ ಹೆಚ್ಚು ಜನರ ಆರೋಗ್ಯ ತಪಾಸಣೆ ನಡೆಸಲಾಯಿತು. ಶಿಬಿರದ ಅಧ್ಯಕ್ಷತೆಯನ್ನು ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ಚಂದ್ರಶೇಖರ್ ವಹಿಸಿದ್ದರು.
ಶಿಬಿರದಲ್ಲಿ ತಾ.ಪಂ.ಸದಸ್ಯೆ ಎನ್.ನಾಗವೇಣಿ, ವೈದ್ಯರಾದ ಡಾ.ಕುಮಾರ್, ಡಾ.ಚಂದ್ರಶೇಖರ್, ಡಾ.ಎ.ಎಂ.ಶಿವಶರಣಯ್ಯ, ಡಾ.ಪ್ರಸಾದ ಬಾಬು, ಡಾ.ಮಂಜುನಾಥ, ಡಾ.ಪದ್ಮಾವತಿ, ಡಾ.ಅರತಿ ಹಿರೇಮಠ, ಡಾ.ಸುಜಾತ, ಮುಖಂಡರಾದ ಪಿ.ಗುರುಶಾಂತನಗೌಡ‌, ಷಡಕ್ಷರಿಗೌಡ, ವೈ.ಮಲ್ಲಣ್ಣ, ಕೆ.ಮಂಜುನಾಥ, ವೈ.ಗಂಗಾಧರ, ಬಸಪ್ಪ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.