ಡೋಂಗೀ ,ವಂಚಕ ಬಾಬಾ ಅರೆಸ್ಟ್..

393

ಕೊಪ್ಪಳ /ಗಂಗಾವತಿ:ನಿಧಿ ತೆಗದು ಕೊಡುವುದಾಗಿ ನಂಬಿಸಿ ಅಮಾಯಕರಿಗೆ ವಂಚಿಸ್ತಿದ್ದ ಡೊಂಗಿ ಬಾಬಾನನ್ನು ಕೊಪ್ಪಳ ಪೊಲೀಸರು ಬಂಧಿಸಿದ್ದಾರೆ. ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅನೂಪ್ ಶೆಟ್ಟಿ ಮಾರ್ಗ ದರ್ಶನದಲ್ಲಿ ಕಾರ್ಯಾಚರಣೆ ನಡೆಸಲಾಗಿತ್ತು. ಪೊಲೀಸರು
ಬಂಧಿತನಿಂದ 56 ಲಕ್ಷ ರೂಪಾಯಿ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ. ನಿಮ್ಮ ಮನೆಯಲ್ಲಿ ನಿಧಿ ಇದೆ. ಪೂಜೆ ಮಾಡಿ, ತೆಗೆದು ಕೊಡುವುದಾಗಿ ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕು ಹಿರೇಜಂತಗಲ್ ಗ್ರಾಮದಲ್ಲಿ ಒಬ್ಬರನ್ನು ಈ ಬಾಬಾ ವಂಚಿಸಿದ್ದ. ಸುಮಾರು 9 ತಿಂಗಳಿಂದ ಕೊಪ್ಪಳ ಜಿಲ್ಲೆಯ ಜನರಿಗೆ ಪಂಗನಾಮ ಹಾಕ್ತಿದ್ದ. ತನ್ನ ಹೆಸರು ಯಾರಬ್ ಅಂತ ಹೇಳಿಕೊಂಡು ಜನ್ರಿಗೆ ವಂಚನೆ ಮಾಡಿದ್ದಾನೆ. ಬಂಧಿತ ಬಾಬಾನಿಂದ 1484 ಗ್ರಾಂ ಚಿನ್ನಾಭರಣ, ಕೃತ್ಯಕ್ಕೆ ಬಳಸಿದ ಇನೊವಾ ಕಾರ್, ಎರಡು ಬೈಕ್ ವಶಪಡಿಸಿಕೊಂಡಿದ್ದಾರೆ. ರಾಜ್ಯದ ಕೊಲಾರ, ಬಳ್ಳಾರಿ, ಬೆಂಗಳೂರು ಯಲಹಂಕ, ಬಂಗಾರಪೇಟೆ, ಹೊಸಪೇಟೆ ಭಾಗಗಳಲ್ಲಿ ಡೋಂಗಿ ಬಾಬಾ ವಂಚನೆ ಮಾಡಿದ್ದಾನೆ. ಇನ್ನು ವಂಚನೆಗೊಳಗಾಗಿದ್ದ ಗಂಗಾವತಿಯ ಹಿರೇಜಂತಕಲ್ ನಿವಾಸಿ ಜಾಮಿದ್ ಪಾಷಾ ನೀಡಿದ ದೂರಿನನ್ವಯ ಪೊಲೀಸರು ತನಿಖೆ ಕೈಗೊಂಡಿದ್ರು, ಜಾಮಿದ್ ಪಾಷಾನಿಂದ 13 ತೊಲೆ ಬಂಗಾರ ಪಡೆದುಕೊಂಡು ವಂಚನೆಮಾಡಿದ್ದ. ಪೊಲೀಸರಿಂದ ವಂಚಕ ಡೋಂಗಿ ಬಾಬಾಗೆ ನ್ಯಾಯಾಂಗ ಬಂಧನ