“ಧರ್ಮ” ಪ್ರಚಾರಕರಾದರೇ…ಡಾಕ್ಟರ್ ಸಾಹೇಬ್ರು?

3313

ಚಿಕ್ಕಬಳ್ಳಾಪುರ/ಚಿಂತಾಮಣಿ: ನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಯಲ್ಲಿ ದಿನಾಂಕ 12 ರಂದು ಮಕ್ಕಳಾಗದಂತೆ ಶಸ್ತ್ರ ಚಿಕಿತ್ಸೆ ಕ್ಯಾಂಪ್ ಹಮ್ಮಿಕೊಳ್ಳಲಾಗಿತ್ತು.

ಶಸ್ತ್ರ ಚಿಕಿತ್ಸೆ ಕ್ಯಾಂಪ್ ನಲ್ಲಿ ಹಲವಾರು ಮಹಿಳೆಯರು ಭಾಗವಹಿಸಿದ್ದರು.ಶಸ್ತ್ರ ಚಿಕಿತ್ಸೆಕೊಟಡಿಗೆ ನಾಲ್ಕು ಜನ ಮಹಿಳೆಯರನ್ನು ಒಳಗಡೆ ಕಳುಹಿಸಲಾಗಿತ್ತು.

ಶಸ್ತ್ರಚಿಕಿತ್ಸೆ ಮಾಡುವ ಸಂದರ್ಭದಲ್ಲಿ ಡಾಕ್ಟರ್ ರಾಮಕೃಷ್ಣ ಎಂಬುವರು ಎಲ್ಲರನ್ನೂ ಕೃಷ್ಣ ಕೃಷ್ಣ ಎಂದು ಜಪಿಸುವಂತೆ ಹೇಳಿದ್ದಾರೆ. ಶಸ್ತ್ರಚಿಕಿತ್ಸೆ ಯಲ್ಲಿ ಮೂರು ಮಹಿಳೆಯರು ಕೃಷ್ಣ ಕೃಷ್ಣ ಎಂತ ಹೇಳಿದ್ದಾರೆ.ಆದರೆ ಒಬ್ಬ ನಾಲ್ಕನೇ ಟೋಕನ್ ಪಡೆದ ಮುಸ್ಲಿಂ ಮಹಿಳೆ ಅಲ್ಹಾಅಲ್ಹಾ ಎಂದು ಹೇಳದ್ದಾರೆ.
ಅದಕ್ಕೆ ಕೋಪಗೊಂಡ ವೈದ್ಯರು ನೀನು ಕೃಷ್ಣ ಕೃಷ್ಣ ಎಂತ ಹೇಳಿದರೆ ಮಾತ್ರ ನಾನು ನಿನಗೆ ಶಸ್ತ್ರ ಚಿಕಿತ್ಸೆ ಮಾಡುತ್ತೇನೆ ಎಂದು ಗದುರಿಸಿ ಒತ್ತಾಯ ಪೂರಕವಾಗಿ ಕೃಷ್ಣ ನಾಮಸ್ಮರಣೆ ಮಾಡಿಸಿದ್ದಾರೆ ಎಂದು ಆರೋಪ ಕೇಳಿಬಂದಿದೆ.

ಕೃಷ್ಣ ಕೃಷ್ಣ ಎಂದು ಹೇಳಿದ ನಂತರವೇ ವೈದ್ಯರು ನನಗೆ ಶಸ್ತ್ರ ಚಿಕಿತ್ಸೆ ಮಾಡಿರುತ್ತಾರೆ. ನನಗೆ ಕೃಷ್ಣ ಕೃಷ್ಣ ಎಂತಾ ಹೇಳು ಎಂದು‌ ಒತ್ತಾಯಿಸಿ ನಮ್ಮ ಮುಸ್ಲಿಂ ಧರ್ಮಕ್ಕೆ ದಕ್ಕೆ ಉಂಟು ಮಾಡಿದ ವೈದ್ಯರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ಫಲಾನುಭವಿ ಒತ್ತಾಯಿಸಿದ ನಾಸೀಮಾ ಬಾನು ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ‌ ಎಂಬುದಾಗಿ ತಿಳಿದು ಬಂದಿದೆ.