“ನಮ್ಮ ಕರ್ನಾಟಕ ರಕ್ಷಣಾ ವೇದಿಕೆ”

242

ಕೋಲಾರ:ನಗರದ ಖಾಸಗಿ ಹೋಟೆಲ್‌ ನಲ್ಲಿ ನಡೆದ ನಮ್ಮ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕ್ರಮದಲ್ಲಿ ಜಿಲ್ಲೆ ಮತ್ತು ತಾಲ್ಲೂಕಿನ ಪದಾಧಿಕಾರಿಗಳನ್ನು ಆಯ್ಕೆ,ಮತ್ತು ಸೇರ್ಪಡೆ ಮಾಡಲಾಯಿತು.
ಉದ್ಘಾಟಿಸಿ ಮಾತನಾಡಿದ ಸಂಸ್ಥಾಪನಾ ರಾಜ್ಯಾಧ್ಯರಾದ ಲಯನ್ಸ್ ಕೆ.ಜಯರಾಜ್ ನಾಯ್ಡು ಕರ್ನಾಟಕದಲ್ಲಿ ಹಲವಾರು ಕನ್ನಡಪರ ಸಂಘಟನೆ ಗಳು ಕಾರ್ಯ ನಿರ್ವಹಿಸುತ್ತಿದ್ದು ತಮ್ಮ ಸ್ವಹಿತಕ್ಕಾಗಿ, ಹಣಕ್ಕಾಗಿ ಕಾರ್ಯ ನಿರ್ವಹಿಸುವಂತಾಗಿದೆ.ಕನ್ನಡದ ಹೆಸರಿನಲ್ಲಿ ಹಣ ಮಾಡಿದರೆ ತಮ್ಮ ತಾಯಿಯ ಹೆಸರಿನಲ್ಲಿ ಹಣ ಮಾಡಿದಂತೆ ನಮ್ಮ ಸಂಘಟನೆಯ ಯಾವೊಬ್ಬ ನಾಯಕ,ಕಾರ್ಯಕರ್ತನೂ ಕೂಡ ಈ ರೀತಿಯ ಕೃತ್ಯಗಳಲ್ಲಿ ಪಾಲ್ಗೊಳ್ಳದೆ ಕನ್ನಡ ಶಾಲೆಗಳ ಅಭಿವೃದ್ದಿ ಮತ್ತು ಕನ್ನಡಪರ ಕಾರ್ಯಕ್ರಮಗಳಲ್ಲಿ ತೊಡಗಿ ಕೊಂಡು ಕನ್ನಡವನ್ನು ಬೆಳೆಸಿ,ಉಳಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರವನ್ನು ವಹಿಸಬೇಕೆಂದರು.ಇದೇ ಸಂದರ್ಭದಲ್ಲಿ ಕರವೇ ಮಂಜುನಾಥ್ ಸೇರ್ಪಡೆ ಗೊಂಡು ರಾಜ್ಯ ಸಂಚಾಲಕರಾಗಿ ಅಧಿಕಾರ ವಹಿಸಿಕೊಂಡರು.
ಜಿಲ್ಲಾ ಗೌರವಾಧ್ಯಕ್ಷರಾಗಿ ವಿಶ್ವನಾಥ್. ವಿ.ಶ್ರೀನಿವಾಸಪುರ ಅಧ್ಯಕ್ಷರಾಗಿ ಬಾಬು ರೆಡ್ಡಿ, ಕೋಲಾರ ಜಿಲ್ಲಾ ಉಪಾಧ್ಯಕ್ಷ ರಾಗಿ ಮಂಜುನಾಥ್ ಕೆ.ಸಿ.ಜವಾಬ್ದಾರಿಗಳನ್ನು ಪಡೆದುಕೊಂಡರು.
ಈ ಸಂದರ್ಭದಲ್ಲಿ ಸಂಸ್ಥಾಪನಾ ಅಧ್ಯಕ್ಷರಾದ ಕೆ.ಜಯರಾಮ್ ನಾಯಡು,ರಾಜ್ಯ ಉಪಾಧ್ಯಕ್ಷರಾದ ಕರವೆ ಮಂಜುನಾಥ್,ಅಹಿಂದ ಮಂಜುನಾಥ್,ರಾಜ್ಯ ಮಹಿಳಾ ಘಟಕದ ರಾಜ್ಯಾಧ್ಯರಾದ ಶೃತಿ,ಜಿಲ್ಲಾಧ್ಯಕ್ಷ ಚಂದ್ರು,ಜಿಲ್ಲಾ ಯುವ ಘಟಕದ ಕಿಶೋರ್, ಉಸ್ತುವಾರಿ ಪ್ರದೀಪ್ ಮುಂತಾದವರು ಇದ್ದರು.