ನೂತನ ಜಿಲ್ಲಾ ಪಂಚಾಯತ್ ಅಧ್ಯಕ್ಷರ ಆಯ್ಕೆ..

250

ಚಾಮರಾಜನಗರ:ನೂತನ ಜಿಲ್ಲಾ ಪಂಚಾಯತ್ ಅಧ್ಯಕ್ಷ ರಾಗಿ ಶ್ರೀಮತಿ ಶಿವಮ್ಮ ಆಯ್ಕೆ.ಎಂ.ರಾಮಚಂದ್ರು ರವರು ರಾಜಿನಾಮೆ ನೀಡಿದ ಹಿನ್ನೆಲೆ, ತೆರವಾಗಿದ್ದ ಸ್ಥಾನಕ್ಕೆ ಇಂದು ಚುನಾವಣೆ ನಡೆಸಲಾಯ್ತು.ಒಟ್ಟು ೨೩ ಸದಸ್ಯರಲ್ಲಿ, ೧೬ ಜನ ಸದಸ್ಯರು ಹಾಜರಾಗಿದ್ದು, ಅದರಲ್ಲಿ ಒಬ್ಬರು ನಾಮಪತ್ರವನ್ನ ಸಲ್ಲಿಸಿದ್ರು. ಕೊಳ್ಳೇಗಾಲ ತಾಲೂಕಿನ, ಪಾಳ್ಯಗ್ರಾಮ ಶಿವಮ್ಮ ನಾಮಪತ್ರವನ್ನ ಸಲ್ಲಿಸಿದ್ದರು. ಮರುಗದಮಣಿ ಇವರಿಗೆ ಸೂಚಕರಾಗಿದ್ದರು. ನಾಮಪತ್ರ ಪರಿಶೀಲನೆಯಲ್ಲಿ ಯಾವುದೇ ತೊಂದರೆ ಇಲ್ಲದ ಕಾರಣ, ಹಿಂಪಡೆಯಲು ೫ ನಿಮಿಷ ಕಾಲಾವಕಾಶ ಕೊಡಲಾಗಿತ್ತು. ನಾಮಪತ್ರ ಹಿಂಪಡೆಯದೆವಿದ್ದ ಕಾರಣ, ಶಿವಮ್ಮ ರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಮೈಸೂರು ವಿಭಾಗದ ಪ್ರಾಧೇಶಿಕ ಆಯುಕ್ತರು ಘೋಷಣೆ ಮಾಡಿದ್ರು.

ದಿನಾಂಕ:- ೧೩.೦೪/೨೦೧೮ ರಿಂದ ೨೯.೦೯.೨೦೨೧ ರವರೆಗೆ ಜಿಲ್ಲಾಧ್ಯಕ್ಷರಾಗಿ ಅಧಿಕಾರದವಧಿ ಮುಂದುವರಿಯಲಿದೆ ಎಂದು ತಿಳಿಸಿದರು.