ಪೋಸ್ಟ್ ಮ್ಯಾನ್ ವಜಾಗೊಳಿಸುವಂತೆ ಒತ್ತಾಯ

265

ಕೊಪ್ಪಳ/ ಯಲಬುರ್ಗಾ: ತಾಲ್ಲೂಕಿನ ಬಳೂಟಗಿ ಮತ್ತು ಚಿಕ್ಕೊಪ್ಪ , ಬಸಾಪುರ ಗ್ರಾಮಗಳಲ್ಲಿ ಅಂಚೆ ವಿತರಕನ ಕರ್ತವ್ಯ ನಿರ್ವಹಣೆ ಹಾಗೂ ಮಾಶಾಸನ ದುರುಪಯೋಗ ಪಡಿಸಿಕೊಂಡಿರುವ ಕುರಿತು ರಮೇಶ ಗಡಾದ ಎಂಬ ವ್ಯಕ್ತಿಯು ಸರಿಯಾದ ವೇಳೆಗೆ ಬರುವುದಿಲ್ಲ ಸಾರ್ವಜನಿಕರ ಸಂದ್ಯಾ ಸುರಕ್ಷ ಹಣ ಮತ್ತು ಅಂಗವಿಕಲರ ಹಣವನ್ನು ಸರಿಯಾದ ರೀತಿಯಲ್ಲಿ ವಿತರಿಸದೇ ತಾನೇ ನಕಲಿಸಹಿ ಮಾಡಿ ಹಣವನ್ನು ದುರ್ಬಳಕೆ ಮಾಡಿಕೊಂಡು ಸಾರ್ವಜನಿಕರಿಗೆ ಮೋಸ ಮಾಡುತ್ತಿರುವುದನ್ನು ಖಂಡಿಸಿ ವಿವಿಧ ಸಂಘಟನೆಗಳು ಪ್ರತಿಭಟನೆ ಮಾಡಿದರು ಕೂಡಲೇ ಪೋಸ್ಟ್ ಮಾನ್ ರಮೇಶ ಗಡಾದ ರನ್ನು ವಜಾಗೂಳಿಸ ಬೇಕೆಂದು ಪೋಸ್ಟ್ ಆಫೀಸ್ ಅಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿದರು