ಬಡಜನರ ಪರ ನಾನು ಕೆಆರ್ ಎಸ್ ಅಭ್ಯರ್ಥಿ

216

ಬೆಂಗಳೂರು/ಮಹದೇವಪುರ; ದಲಿತ ಹಾಗೂ ಕೂಲಿ ಕಾರ್ಮಿಕ ಜನರು ಸುಮಾರು ವರ್ಷಗಳಿಂದ ಮನೆ ಕಟ್ಟಿಕೊಂಡು ವಾಸ ಮಾಡುತ್ತಿದ್ದರೂ ಅವರಿಗೆ 94 ಸಿಸಿ ಡಿಯಲ್ಲಿ ಹಕ್ಕು ಪತ್ರ ನೀಡುವಲ್ಲಿ ವಿಫಲರಾಗಿದ್ದಾರೆ ಎಂದು ಮಹದೇವಪುರ ವಿಧಾನ ಸಭಾ ಕ್ಷೇತ್ರದ ರಿಪಬ್ಲಿಕನ್ ಸೇನಾ ಪಕ್ಷದ ಅಭ್ಯರ್ಥಿ ಕನ್ನಲಿ ಕೃಷ್ಣಪ್ಪ ತಿಳಿಸಿದರು.
ಕ್ಷೇತ್ರದ ವಿವಿಧ ಭಾಗಗಳಲ್ಲಿ ಚುನಾವಣಾ ಪ್ರಚಾರ ಕೈಗೊಂಡು ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಕ್ಷೇತ್ರದಲ್ಲಿ ವಾಸಮಾಡುವ ಬಡವರ ಕೇರಿಗಳಲ್ಲಿ ಸರಿಯಾದ ರಸ್ತೆ ಹಾಗೂ ಒಳಚರಂಡಿ ಕಾಮಗಾರಿ ಮಾಡದೆ ಬಡಜನರನ್ನು ಮತ ಬ್ಯಾಂಕನ್ನಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ದೂರಿದರು.ದೇಶದಲ್ಲಿ ಬಿಜೆಪಿ ಸರ್ಕಾರದಿಂದ ಸ್ವಚ್ಚ ಭಾರತ ಕಾರ್ಯಕ್ರಮ ಬಡವರ ಕೇರಿಗಳಲ್ಲಿ ನೋಡಿದರೆ ಗೊತ್ತಾಗುತ್ತದೆ ಎಂದರು.
ಕ್ಷೇತ್ರದ ಪ್ರಮುಖ ಕೆರೆಗಳಾದ ಬೆಳ್ಳಂದೂರು, ವರ್ತೂರು ಹಾಗೂ ರಾಂಪುರ ಕೆರೆಗಳಲ್ಲಿ ಕಲುಶಿತ ನೀರು ಸೇರಿ ದುನರ್ಾತ ಬಂದು ಆ ಭಾಗದ ಜನರು ವಾಸ ಮಾಡಲು ಕಷ್ಟಪಡುತ್ತಾರೆ ಎಂದರು. ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ರವರ ಮೂಮ್ಮಗ ಆನಂದ್ರಾಜ್ ಅಂಬೇಡ್ಕರ್ ಸ್ಥಾಪಿತ ರಿಪಬ್ಲಿಕನ್ ಸೇನೆ ಪಕ್ಷಕ್ಕೆ ತಾವೆಲ್ಲರೂ ಬೆಂಬಲಿಸಬೇಕಾಗಿದೆ ಎಂದರು. ಕ್ಷೇತ್ರದಲ್ಲಿ ಸುಮಾರು ಕಡೆ ಸಕರ್ಾರಿ ಜಾಗಗಳಿದ್ದು ಕೂಲಿ ಕಾರ್ಮಿಕರಿಗೆ ವಾಸ ಮಾಡಲು ಸ್ವಂತ ನಿವೇಶನಾ ನೀಡದೆ ಜನರನ್ನು ವಂಚಿಸುತ್ತಿದ್ದಾರೆ. ರಾಜಕೀಯ ವ್ಯೆಕ್ತಿಗಳು ತಮ್ಮ ಸ್ವಾರ್ಥಕ್ಕೆ ಸ್ಲಂಗಳನ್ನು ನಿಮರ್ಾಣ ಮಾಡಿಸಿ ಆ ಜಾಗವನ್ನು ಹಣಕ್ಕೆ ಬಿಲ್ಡರ್ಗಳಿಗೆ ಮಾರಾಟ ಮಾಡಿ ಬಡವರನ್ನು ವಂಚಿಸುತ್ತಾ ಬಂದಿದ್ದರೆ ಎಂದರು. ಕರ್ನಾಟಕ ರಿಪಬ್ಲಿಕನ್ ಸೇನೆ ರಾಜ್ಯ ಕಾರ್ಮಿಕ ಘಟಕದ ಅಧ್ಯಕ್ಷರಾಗಿ ಹಲವಾರು ಹೋರಾಟಮಾಡಿಕೊಂಡು ಬಂದಿರುವ ನನಗೆ ಮಹದೇವ ಪುರ ವಿಧಾನ ಸಭಾ ಕ್ಷೇತ್ರದ ಜನರ ಕಷ್ಟಗಳನ್ನು ಹತ್ತಿರ ದಿಂದ ನೊಡಿದ್ದೇನೆ ಎಂದರು.ಈ ಕ್ಷೇತ್ರದ ಬಡಜನರ ಹಾಗೂ ಕ್ಷೇತ್ರದ ಸಮರ್ಪಕ ಅಭಿವೃದ್ದಿಗೆ ತಾವೆಲ್ಲ ರಿಪಬ್ಲಿಕನ್ ಸೇನಾ ಪಕ್ಷದ ಆಭ್ಯರ್ಥಿ ಯಾದ ನನಗೆ ಮತ ನೀಡಿ ಆನಂದ್ರಾಜ್ ಅಂಬೇಡ್ಕರ್ರವರ ಕೈ ಬಲಪಡಿಸ ಬೇಕೆಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಜ್ಯೋತಿ,ಸುಮಾ,ರೀನಾ, ವಿಜಯಮ್ಮ, ಗೀತಾ ಹಾಗೂ ನೂರಾರು ಕಾರ್ಯಕರ್ತರು ಹಾಜರಿದ್ದರು.