ಬಿಜೆಪಿ ಕಛೇರಿಯಲ್ಲಿ-ದುರ್ಗಾ ಪೂಜೆ

292

ಬಳ್ಳಾರಿ /ಹೊಸಪೇಟೆ: ದಸರಾ ಉತ್ಸವ ಅಂಗವಾಗಿ ಸ್ಥಳೀಯ ಬಿಜೆಪಿ ಕಛೇರಿಯಲ್ಲಿ ಬುಧವಾರ ವಿಶೇಷ ದುರ್ಗಾ ಪೂಜೆ ನೆರ ವೇರಿಸಲಾಯಿತು.

ದಸರಾ ಉತ್ಸವ ಅಂಗವಾಗಿ ಜರುಗಿದ ದುರ್ಗಾ ಪೂಜೆ ಕಾರ್ಯಕ್ರಮಕ್ಕೆ ಸ್ಥಳೀಯ ಹಂಸಾಂಬ ಶಾರದಾಶ್ರಮದ ಮಾತೆ ಪ್ರಮೋದಾಮಯಿ, ದುರ್ಗಾದೇವಿಗೆ ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮದ ಅಂಗವಾಗಿ 600 ಜನ ಮುತೈದೆಯರಿಗೆ ಉಡಿ ತುಂಬಲಾಯಿತು.
ಕಾರ್ಯಕ್ರಮದಲ್ಲಿ ಬಿಜೆಪಿ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಶಶಿಕಲಾ, ತಾಲೂಕು ಘಟಕದ ಅಧ್ಯಕ್ಷೆ ಕವಿತಾ ಈಶ್ವರ್ ಸಿಂಗ್, ಪ್ರಧಾನ ಕಾರ್ಯದರ್ಶಿ ಗೀತಾ ಶಂಕರ್, ಬಿಜೆಪಿ ಮಂಡಲ ಅಧ್ಯಕ್ಷ ಸಂದೀಪ್ ಸಿಂಗ್, ಮಾಜಿ ಶಾಸಕ ರತನ್ ಸಿಂಗ್, ಮುಖಂಡರಾದ ಬಸವರಾಜ ನಾಲತ್ವಾಡ್, ಶಶಿಧರ ಸ್ವಾಮಿ, ರಾಜಶೇಖರ್, ಜೀವರತ್ನಂ ಸೇರಿದಂತೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.