ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ

410

ಬೆಂಗಳೂರು/ಯಲಹಂಕ: ಉಪನಗರದ ಬಿಜೆಪಿ ಪಕ್ಷದಮುಖಂಡ ಅಣ್ಣಪ್ಪ ಭಟ್ರು, ಯಲಹಂಕ ಉಪನಗರದ ನಾಲ್ಕನೇ ಹಂತದ ಲಕ್ಷ್ಮಿ ಮುನಿರಾಜು, ಅಟ್ಟೂರಿನ ಲಕ್ಷ್ಮಮ್ಮ (ಕುಳ್ಳಮ್ಮ), ತಿರುಮಲ ನಗರದ ಮಹಾಲಕ್ಷ್ಮಿ, ಹಾಗೂ  ಐವತ್ತಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರು ಪಕ್ಷತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಗೊಂಡಿದ್ದಾರೆ. ಯಲಹಂಕ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಮುಖಂಡರಾದ ಎಂ.ಎನ್,ಗೋಪಾಲಕೃಷ್ಣ ರವರ ಸಮ್ಮುಖದಲ್ಲಿ ಕಾಂಗ್ರೆಸ್ಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆ ಯಾಗಿರುವುದಾಗಿ “ನಮ್ಮೂರು ಟಿವಿ” ವಾಹಿನಿಗೆ ಎಂ.ಎನ್. ಗೋಪಾಲಕೃಷ್ಣ ತಿಳಿಸಿದ್ದಾರೆ.