ಬಿಜೆಪಿ ಬಂದ್…. ಸಂಪೂರ್ಣ ವಿಫಲ !?

228

ಚಿಕ್ಕಬಳ್ಳಾಪುರ/ ಚಿಂತಾಮಣಿ ನೂತನ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಚುನಾವಣೆ ಪ್ರಣಾಳಿಕೆಯಲ್ಲಿ ರಾಜ್ಯದ ರೈತರಿಗೆ ನೀಡಿದ ಸಾಲಮನ್ನಾ ಭರವಸೆಯನ್ನು ಈಡೇರಿಸುವಲ್ಲಿ ವಿಫಲವಾಗಿದ್ದಾರೆ. ಸಾಲಮನ್ನಾ ಬಗ್ಗೆ ತಕ್ಷಣ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಬಿಜೆಪಿ ಪಕ್ಷ ಕರೆಕರೆ ನೀಡಿದ್ದ ಚಿಂತಾಮಣಿ ಬಂದ್ ಸಂಪೂರ್ಣ ವಿಫಲವಾಗಿದೆ.

ತಾಲ್ಲೂಕು ಬಿಜೆಪಿ ಘಟಕದ ತಾಲೂಕು ಅಧ್ಯಕ್ಷ ಆಂಜನೇಯ ರೆಡ್ಡಿ ನೇತೃತ್ವದಲ್ಲಿ ಪಕ್ಷದ ಕಾರ್ಯಕರ್ತರ ಬೈಕ್ ರ್ಯಾಲಿ ಯಲ್ಲಿ ತೆರಳಿ ನಗರದ ಹಲವಾರು ಕಡೆ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸಲು ಹೋದ 27 ಮಂದಿಯನ್ನು ಬಂಧಿಸಲಾಯಿತು.

ಬಿಜೆಪಿವಪಕ್ಷ ಕರೆ ನೀಡದ್ದ ಬಂದ್ ಗೆ ಯಾವುದೇ ಸ್ಥಳೀಯ ಸಂಘಟನೆಗಳು ಬೆಂಬಲ ನೀಡದ ಹಿನ್ನಲೆ ಯಲ್ಲಿ ಚಿಂತಾಮಣಿ ಬಂದ್ ಸಂಪೂರ್ಣ ವಿಫಲ.