ಭೋಗ‌ ನಂದೀಶ್ವರನ‌ ಬ್ರಹ್ಮ ರ‌ಥೋತ್ಸವ

435

ಚಿಕ್ಕಬಳ್ಳಾಪುರ/ನಂದಿ:ಪ್ರತಿ ವರ್ಷದಂತೆ ಈ ಬಾರಿಯು ಇತಿಹಾಸ ಪ್ರಸಿದ್ದ ದಕ್ಷಿಣ ಕಾಶಿಎಂದೆ ಪ್ರಸಿದ್ದವಾಗಿರುವ ಭೋಗನಂದೀಶ್ವರ ದೇವಾಲಯದ ಜೋಡಿ ಬ್ರಹ್ಮ ರಥೋತ್ಸವವು ವಿಜೃಂಭಣೆಯಿಂದ ನಡೆಯಿತು. ಮಹಾಶಿವರಾತ್ರಿಯ ಮಾರನೇದಿನ ಚಕ್ಕ ಬಳ್ಳಾಪುರ ತಾಲೂಕಿನ ದಕ್ಷಿಣಕಾಶಿ ಪಂಚಗಿರಿಗಳ ಮದ್ಯದಲ್ಲಿರುವ ನಂದಿ ಗ್ರಾಮದ ಭೋಗ ನಂದೀಶ್ವರನ ಕಲ್ಲಿನ ಬ್ರಹ್ಮ ರಥೋತ್ಸವವನ್ನು ನೋಡಲು ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಸಾಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ರಥೋತ್ಸವಕ್ಕೆ ಶಾಸಕ ಸುದಾಕರ್, ಸಂಸದ ಎಂ.ವೀರಪ್ಪಮೋಯ್ಲಿ ಚಾಲನೆ ನೀಡಿದರು. ವರ್ಷದಿಂದ ವರ್ಷಕ್ಕೆ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದ್ದರೂ ಈ ಭಾರಿ ಚಾಮರಾಜ ನಗರದ ಸುಲ್ವಾಡಿ ಹಾಗೂ ಚಿಂತಾಮಣಿಯ ಗಂಗಾಭಾಗಿರಥಿ ದೇವಸ್ಥಾನದ ವಿಷ ಪ್ರಸಾದ ಪ್ರಕರಣದ ಕರಿ ಛಾಯೆ ನಂದಿ ಬ್ರಹ್ಮ ರಥೋತ್ಸವದ ಮೇಲೆ ಬೀರಿದ್ದರಿಂದ ಜಿಲ್ಲಾಡಳಿತವು ಈ ಭಾರಿ ರಥೋತ್ಸವದಲ್ಲಿ ಯಾವೂದೇ ರೀತಿಯ ಪ್ರಸಾದ ಹಾಗೂ ಅನ್ನ ಸಂತರ್ಪಣೆ ವಿತರಣೆಗೆ ನಿರ್ಭಂಧ ವಿಧಿಸಿದ್ದರಿಂದ ದೂರದ ಊರುಗಳಿಂದ ಬಂದತಹ ಭಕ್ತರು ಹಸಿವಿನಿಂದ ಬಳಲುವಂತಾಗಿತ್ತು. ಇನ್ನೂ ರಥೋತ್ಸವದಲ್ಲಿ ಜಿ.ಪಂ ಸದಸ್ಯ ಮುನೇಗೌಡ, ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ ಸೇರಿದಂತೆ ಹಲವಾರು ಗಣ್ಯರು ಪಾಲ್ಗೊಂಡಿದ್ದರು…

  • ವರದಿ: ಬಾಬು ನಮ್ಮೂರು ಟಿವಿ ಚಿಕ್ಕಬಳ್ಳಾಪುರ.