ಮೈ ಬೀ ಚೌಕೀದಾರ್…

944

ಬೆಂಗಳೂರು ನಗರ/ಮಹದೇವಪುರ:- ಕ್ಷೇತ್ರದ ದೊಡ್ಡನೆಕ್ಕುಂದಿ ವಾರ್ಡ್ ಚೀನ್ನಪ್ಪನ ಹಳ್ಳಿಯಲ್ಲಿ  ಭಾನುವಾರ ಮೈ ಬೀ ಚೌಕೀದಾರ್ ಎಂಬ ಕಾರ್ಯಕ್ರಮ ಸಂಜೆ 5 ಕ್ಕೆ ಹಮ್ಮಿಕೊಳ್ಳಲಾಗಿದ್ದು ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ನಡೆಯಲಿದ್ದು ಈ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯದ್ಯಕ್ಷ ಬಿ.ಎಸ್ ಯಡಿಯೂರಪ್ಪ, ಸಂಸದ ಹಾಗೂ ಕೇಂದ್ರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಪಿ.ಸಿ.ಮೋಹನ್, ಸ್ಥಳೀಯ ಶಾಸಕ ಅರವಿಂದ ಲಿಂಬಾವಳಿ ಭಾಗವಹಿಸಲಿದ್ದು ನೇರವಾಗಿ ದೇಶದ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಾಮಾನ್ಯ ಮತದಾರನೂ ಮಾತನಾಡುವ ಅವಕಾಶ ಕಲ್ಪಿಸಿದ್ದು ತಮ್ಮ ಸಲಹೆ ಸೂಚನೆಗಳನ್ನು ನೀಡಬಹುದು ಎಂದು ಮಹದೇವಪುರ ಕ್ಷೇತ್ರದ ಅಧ್ಯಕ್ಷ ರಾಜಾರೆಡ್ಡಿ ತಿಳಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ವೆಂಕಟಸ್ವಾಮಿರೆಡ್ಡಿ, ಹೂಡಿ ವಿಜಯ್ ಕುಮಾರ್, ಮಹೇಂದ್ರ ಮೋದಿ, ನಾಗಭೂಷಣ ರೆಡ್ಡಿ, ಸತೀಶ್ ರೆಡ್ಡಿ, ಲೋಕೇಶ್ ಕುಮಾರ್, ನಾಗೇಶ್ ಮುಂತಾದವರು ಹಾಜರಿದ್ದರು.