ಯಾದವ ಸಮುದಾಯಕ್ಕೆ ಸಚಿವಸ್ಥಾನ ವಂಚನೆ ಆರೋಪ..!?

28

ಬೆಂಗಳೂರು ಗ್ರಾಮಾಂತರ/ದೊಡ್ಡಬಳ್ಳಾಪುರ: ಯಾದವ(ಗೊಲ್ಲಸಮುದಾಯ)ಏಕೈಕ ಶಾಸಕಿ ಶ್ರೀಮತಿ ಪೂರ್ಣಿಮಾ ಶ್ರೀನಿವಾಸ್ ರನ್ನು ಸಂಪುಟ ದಿಂದ ಕೈಬಿಟ್ಟ ವಿಚಾರವಾಗಿ ಅಸಮಾಧಾನ ವ್ಯಕ್ತಡಿಸಿದ ಸಮುದಾಯದ ಮುಖಂಡರು. ನಗರದ ಪ್ರವಾಸಿಮಂದಿರದಲ್ಲಿ ಕರೆದಿದ್ದ ಪತ್ರಿಕಾ ಗೋಷ್ಠಿಯಲ್ಲಿ ಸಮುದಾಯದ ಮುಖಂಡ ಎವಿ. ನಾರಾಯಣ್ ಮಾತನಾಡುತ್ತಾ ರಾಜ್ಯಾ ದ್ಯಂತ ಸರಿ ಸುಮಾರು ನಲವತ್ತು ಲಕ್ಷ ಜನ ಸಂಖ್ಯೆ ಹೊಂದಿರುವ ಶೋಷಿತ ಸಮುದಾಯದ ಏಕೈಕ ಶಾಸಕಿ ಶ್ರೀಮತಿ ಪೂರ್ಣಿಮರವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡುವುದಾಗಿ ಬರವಸೆ ನೀಡಿ ಕೊನೆ ಗಳಿಗೆಯಲ್ಲಿ ಸಚಿವ ಸಚಿವಸ್ಥಾನ ನೀಡದೆವಂಚಿಸಿದ್ದು,ಮುಖ್ಯಮಂತ್ರಿ ಬೊಮ್ಮಾಯಿರವರ ಸಚಿವ ಸಂಪುಟ ಕೇವಲ ಲಿಂಗಾಯತ ಮತ್ತು ಒಕ್ಕಲಿಗರಿಗಷ್ಟೆ ಸೀಮಿತ ಎಂದು ಸಾಬಿತು ಪಡೆಸಿಕೊಂಡಿದ್ದಾರೆ ಎಂದು ದೂರಿದರು.ಅವರು ನಮ್ಮ ಸಮುದಾಯದ ಏಕೈಕ ಶಾಸಕಿಯರೊಬ್ಬರಿಗೆ ವಂಚನೆ ಮಾಡಿ ದ್ದಲ್ಲ.ರಾಜ್ಯದ ಇಡೀ ಸಮುದಾಯಕ್ಕೆ ಮಾಡಿದ ವಂಚನೆ ಮತ್ತು ಅವಮಾನ ಇಡೀ ರಾಜ್ಯದ ಯಾದವ ದಮುದಾಯದ ಪ್ರತಿ ಯೊಬ್ಬರನ್ನು ಕೆರಳಿಸಿದಂತಹ ಈ ಘಟನೆ ಯಿಂದ ರಾಜ್ಯದ ಪ್ರತಿಯೊಂದು ಜಿಲ್ಲಾ ಮತ್ತು ತಾಲೂಕು ಮಟ್ಟ ದಲ್ಲಿ ಪ್ರತಿಭಟನೆಗೆ ಮುಂದಾಗಾ ಬೇಕಾಗುತ್ತದೆ ಮತ್ತು ಬಿಜೆಪಿ ಪಕ್ಷಕ್ಕೆ ಮುಂಬರುವ ಚುನಾವಣೆ ಯಲ್ಲಿ ನಮ್ಮ ಸಮುದಾಯ ಉತ್ತರಿ ಸಲಿದ್ದೇವೆ ಎಂದು ತಮ್ಮಆಕ್ರೋಶ ವ್ಯಕ್ತ ಪಡೆಸಿದರು. ಈ ಭವಷ್ಯದಲ್ಲಿ ಪಕ್ಷದ ಒಳಿತಿಗಾಗಿ ಚಿಂತಿಸಿ ಈ ಕೂಡಲೇ ನಮ್ಮ ಯಾದವ ಸಮುದಾಯದ ಏಕೈಕ ಶಾಸಕಿ ಶ್ರೀಮತಿ ಪೂರ್ಣಿಮಾ ಶ್ರೀ ನಿವಾಸ್ ರವರಿಗೆ ಸಂಪುಟದಲ್ಲಿ ಸಚಿವ ಸ್ಥಾನ ಕಲ್ಪಿಸಿ ಸೂಕ್ತ ಸ್ಥಾನಮಾನ ನೀಡಬೇಕೆಂದು ಒತ್ತಾಯಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಕೃಷ್ಣಮೂರ್ತಿ ಹನು ಮಂತರಾಯಪ್ಪ,ಗೋಪಿನಾಥ,ಎನ್.ಚಂದ್ರಶೇಖರ್,ರಮೇಶ್ ಕುಮಾರ್,ಹುಲಿಯಾ ಯಾದವ್ ಮತ್ತುಬಸವರಾಜು ಉಪಸ್ಥಿತ ರಿದ್ದರು.