ಯೋಧನ ಮನೆಗೇ..ದ್ರೋಹ ಬಗೆಯುವುದೇ…?

5716

ತುಮಕೂರು/ ಪಾವಗಡ :- ದೇಶ ಕಾಯುವ ಯೋಧನ ಮನೆಗೆ ಕುಡಿಯುವನೀರಿನ ಸೌಲಭ್ಯ ವಿಲ್ಲದೆ ವೃದ್ಧ ತಂದೆ ತಾಯಿ ಪರದಾಡುತ್ತಿರುವ ಘಟನೆ ಪಾವಗಡ ತಾಲ್ಲೂಕಿನ ಗುಜ್ಜನಡು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕೋಣದಕುರಿಕೆ ಗ್ರಾಮದಲ್ಲಿ ತಡವಾಗಿ ಬೆಳಕಿಗೆ ಬಂದಿದೆ

ಇರುವಾ ಒಬ್ಬನೇ ಮಗ ವೆಂಕಟೇಶ್ ಗೌಡ ಸಿಎರ್ ಪಿಎಪ್ ಯೋಧನಾಗಿ ಗಡಿಕಾಯುವಾ ಕೇಲಸದಲ್ಲಿ ನಿರತನಾಗಿದ್ದು ಮಗನು ದೇಶ ಕಾಯುವಾ ತವಕದಲ್ಲಿ ತೊಡಗಿ ವಯಸ್ಸಾದ, ಯೋಧನ ತಂದೆ ತಾಯಿ ಕುಡಿಯುವ ನೀರಿನ ಸಂಪರ್ಕಕ್ಕೆ ಗುಜ್ಜನಡು ಗ್ರಾಮ ಪಂಚಾಯ್ತಿಗೆ ಆಲೆದಾಡಿದ ಆಮಾನವೀಯ ಘಟನೆ ನಡೆದಿದೆ.

ತಮ್ಮ ಮಗ ಸೇನೆಯಲ್ಲಿರುವುದನ್ನು ಸಂಬಂದಪಟ್ಟ ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಕಾರ್ಯದರ್ಶಿ ಮತ್ತು ತಾಲ್ಲೂಕು ಅಭಿಿವೃದ್ದಿ ಪರೀಶಿಲನಾ ಅಧಿಕಾರಿಗಳ ಗಮನಕ್ಕೆ ತಂದರೂ ಕುಡಿಯುವಾ ನೀರಿನ ಸೌಲಭ್ಯ ಒದಗಿಸುವಲ್ಲಿ ಗ್ರಾಮ ಪಂಚಾಯಿತಿ ಆಧಿಕಾರಿಗಳು ವಿಫಲವಾಗಿದ್ದಾರೆ ಎಂದು ಯೋಧನ ತಂದೆ ತಾಯಿ ಮೂಡಲಗಿರಿಯಪ್ಪ ನಾಗಮ್ಮ ಆವೇದನೆ ವ್ಯಕ್ತಪಡಿಸುತ್ತಿದ್ದಾರೆ.

ನಾಚಿಕೆ ಯಾಗಬೇಕು ಜನಪ್ರತಿನಿಧಿಗಳಿಗೆ . ಕಾಟಾಚಾರಕ್ಕೆ ಕಾಲಿಗೆ ಬಿದ್ದು ಮತಗಿಟ್ಟಿಸಿಕೊಂಡು ಸದಸ್ಯರ ಹೆಸರಲ್ಲಿ ಬಿಳಿಬಟ್ಟೆ ತೊಟ್ಟು ಸಾಮಾಜಿಕ ಕಾಳಜಿಯನ್ನೇ ಮರೆತು ಪ್ರತಿಷ್ಟೆಗೆ ಬಿದ್ದು ವಯಕ್ತಿಕ ರಾಜಕಾರಣ ಮಾಡುವ ಅವಿವೇಕಿಗಳಿಗೆ . ಪ್ರಾಣ ಒತ್ತೆಯಿಟ್ಟು ದೇಶದ ರಕ್ಷಣೆಗೆ ನಿಂತಿರುವ ಒಬ್ಬ ದೇಶಕಾಯುವ ಯೋಧನ ಮತ್ತು ಆತನ ಕುಟುಂಬದ ರಕ್ಷಣೆಯ ಮರೆತು ಬದಲಿಗೆ ಕುಡಿಯುವ ನೀರಿಗೆ ದ್ರೋಹಬಗೆಯುವ ಇವರಿಗೇನು ತಲೆಕೆಟ್ಟಿದೆಯೇ?

ವಿದ್ಯಾವಂತ ಅಧಿಕಾರಿಗಳ ಕಣ್ಣೆದುರೇ ಇಷ್ಟೆಲ್ಲಾ ಅಮಾನವೀಯ ನಡೆಯುತ್ತಿದ್ದರೂ ಕಣ್ಮುಚ್ಚಿ ಕುಳಿತಿರುವ. ಉದ್ದೇಶ ವೇನು? ಕೂಡಲೇ ಸಂಬಂಧಿತ ಅಧಿಕಾರಿಗಳು ಸಮಸ್ಯೆಯನ್ನು ಬಗೆಹರಿಸಿ ಯೋಧನ ಮನೆಗೆ ನೀರು ಕೊಡಿಸಿ ಯೋಧರ ಕುಟುಂಬಕ್ಕೆ ಸಹಕಾರಿಗಳಾಗಿ. ಒಬ್ಬ ದೇಶಕಾಯುವ ಯೋಧನಿಗೆ ಗೌರವಸಲ್ಲಿಸಿ..