ರಂಗಭೂಮಿ ಶಿಕ್ಷಣ ಅತ್ಯವಶ್ಯಕ

1003

ಕೋಲಾರ : ಮಕ್ಕಳಿಗೆ ನಿಜವಾದ ಶಿಕ್ಷಣ ರಂಗಭೂಮಿ ರಂಗ ಚಟುವಟಿಕೆಗಳಲ್ಲಿ ತೊಡಗಿದರೆ ಜ್ಙಾಪಕ ಶಕ್ತಿಯನ್ನು ಹೆಚ್ಚಿಸುತ್ತದೆ ಜೊತೆಗೆ ವೇದಿಕೆಗಳಲ್ಲಿ ದೈರ್ಯವಾಗಿ ಮಾತಾಡುವಂತ ಕೌಶಲ್ಯ ವೃದ್ದಿಸುತ್ತದೆ. ಅಂಕಗಳಿಗಷ್ಟೇ ಶಿಕ್ಷಣ ನೀಡುವ ಶಾಲೆಯಾಗದೆ ಮಕ್ಕಳಿಗೆ ರಂಗಭೂಮಿ ಶಿಕ್ಷಣ ಅತ್ಯಾವಶ್ಯಕವಾಗಿದೆ ಎಂದು ಅದ್ಯಕ್ಷರು ಚಿಣ್ಣರ ಚಿಲುಮೆ ಹಾಗೂ ಖ್ಯಾತ ಸಾಹಿತಿ ಕೋಟಗಾನಹಳ್ಳಿ ರಾಮಯ್ಯ ಮಾತನಾಡಿದರು.

ಬೆಂಗಳೂರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಮತ್ತು ಕಾಪಾಲಿಕ ಹಾಗೂ ಇಂಚರ ಸಂಸ್ಥೆಗಳ ಸಹಯೋಗದಲ್ಲಿ ಸರ್ಕಾರಿ ಹಿರಿಯ ಪ್ರಾರ್ಥಮಿಕ ಶಾಲೆಯಲ್ಲಿ ನಡೆದ ಚಿಣ್ಣರ ಚಿಲುಮೆ ರಂಗಶಿಬಿರ ಕಾರ್ಯಕ್ರಮವನ್ನು ತಮಟೆ ನುಡಿಸುವ ಮೂಲಕ ಉದ್ಘಾಟಿಸಿ ಮಾತನಾಡಿ ಮಕ್ಕಳು ನಾಟಕಗಳಲ್ಲಿ ತೊಡಗುವ ಮೂಲಕ ಬಹು ಮುಖ ಪ್ರತಿಭೆಗಳು ಬೆಳಸಿಕೊಳ್ಳಲು ಸಾದ್ಯವಾಗುತ್ತದೆ ಎಂದು ಚಿಣ್ಣರ ಚಿಲುಮೆ ಸಂಯೋಜಕ ಶಂಕರ್ ಹಾಲಗತ್ತಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ನಾಟಕ ನಿರ್ದೇಶಕ ರಾಮಕೃಷ್ಣ ಬೆಳತೂರು, ಗ್ರಾಮ ಪಂಚಾಯಿತಿ ಸದಸ್ಯ ರಾಜಣ್ಣ, ಎಸ್ ಎಂಸಿ ಅದ್ಯಕ್ಷ ಶ್ರೀನಿವಾಸ್, ಎಂ.ಪಿ ನಾರಾಯಣಸ್ವಾಮಿ  ಕಾಪಾಲಿಕ ಅದ್ಯಕ್ಷ ನಾರಾಯಣಸ್ವಾಮಿ, ಇಂಚರ ನಾರಾಯಣಸ್ವಾಮಿ, ಈ ಧರೆ ಪ್ರಕಾಶ್ ಕಲಾವಿದ ಚೌಡದೇನಹಳ್ಳಿ ಕುಪೇಂದ್ರ ಹಾಗೂ ಮುಂತಾದವರು ಬಾಗವಹಿಸಿದ್ದರು.