ರಂಜಾನ್ ಅಂಗವಾಗಿ ಜಲಾಶಯ ವೀಕ್ಷಣೆ..

320

ಬಳ್ಳಾರಿ /ಹೊಸಪೇಟೆ:ರಂಜಾನ್ ಹಬ್ಬದ ಸಂಭ್ರಮದಲ್ಲಿರುವ ಮುಸ್ಲಿಂ ಬಾಂಧವರು, ತುಂಗಭದ್ರಾ ಜಲಾಶಯ ವೀಕ್ಷಣೆಗಾಗಿ ಸಹಸ್ರಾರು ಸಂಖ್ಯೆಯಲ್ಲಿ ಟಿ.ಬಿ.ಡ್ಯಾಂ ಕಡೆ ಮಂಗಳವಾರ ಮುಖ ಮಾಡಿದ್ದರು.
ಪ್ರತಿವರ್ಷದಂತೆ ರಂಜಾನ್ ಹಬ್ಬದ ಮಾರನೇ ದಿನ ಮುಸ್ಲಿಂ ಬಾಂಧವರು, ಪರಿವಾರ ಸಮೇತವಾಗಿ, ಬಂಧು-ಮಿತ್ರರೊಂದಿಗೆ ಟಿ.ಬಿ.ಡ್ಯಾಂಗೆ ಬೇಟಿ ನೀಡಿ. ಹಬ್ಬದ ಖಷಿಯನ್ನು ಅನುಭವಿಸಿದರು.
ಜಲಾಶಯದ ಕೆಳ ಭಾಗದಲ್ಲಿರುವ ಉದ್ಯಾನವನದಲ್ಲಿರುವ ಸಂಗೀತ ಕಾರಂಜಿ, ಚಕ್ರವನ, ಜಿಂಕೆವನ ವೀಕ್ಷಣೆ ಮಾಡಿದ ಅವರು, ಪಕ್ಕದ ನೀರಿನ ಕೊಳದಲ್ಲಿ ಬೋಟಿಂಗ್ ಮಾಡಿ ಮಜಾ ಅನುಭವಿಸಿದರು. ಮುಂಜಾಗ್ರತ ಕ್ರಮವಾಗಿ ಟಿ.ಬಿ.ಡ್ಯಾಂ ಪೊಲೀಸರು, ಸೂಕ್ತ ಬಂದೋಬಸ್ತ್ ವ್ಯವಸ್ತೆ ಕಲ್ಪಿಸಿದ್ದರು.