ರಕ್ತದಾನ ಶಿಬಿರ,ಉಚಿತ ಆರೋಗ್ಯ ತಪಾಸಣೆ.

480

ಚಿಕ್ಕಬಳ್ಳಾಪುರ/ಚಿಂತಾಮಣಿ:- ಭಾರತೀಯ ರೆಡ್ ಕ್ರಾಸ್ ಸೊಸೈಟಿ, ಚಿಕ್ಕಬಳ್ಳಾಪುರ ಜಿಲ್ಲಾ ಘಟಕ , ಈಸ್ಟ್ ಪಾಯಿಂಟ್‌ ಆಸ್ಪತ್ರೆ ಬಿದರಹಳ್ಳಿ ಬೆಂಗಳೂರು ಇವರ ಸಹಯೋಗದಲ್ಲಿ ಯುವ ರೆಡ್ ಕ್ರಾಸ್ ಘಟಕದಿಂದ ಇಂದು ನಗರದ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ರಕ್ತದಾನ ಶಿಬಿರ ಮತ್ತು ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ದೀಪ ಬೆಳಗಿಸುವ ಮೂಲಕ ಮತ್ತು ಟೆಪ್ ಕಟ್ ಮಾಡುವ ಮುಖಾಂತರ ಶಿಬಿರಕ್ಕೆ ಚಾಲನೆ ನೀಡಿದರು.

ವರದಿಗಾರರೊಂದಿಗೆ ಮಾತನಾಡಿದ ಮಹಿಳಾ ಕಾಲೇಜಿನ ಪ್ರಾಂಶುಪಾಲರಾದ ಪ್ರೊಫೆಸರ್ ಶಿವಶಂಕರ್ ಪ್ರಸಾದ್ ಮತ್ತು ರೆಡ್ ಕ್ರಾಸ್ ಸಂಚಾಲಕರಾದ ಪ್ರೊಫೆಸರ್ ಚಂದ್ರಶೇಖರ್ ಅವರು ಇಂದು ಮಹಿಳಾ ಕಾಲೇಜಿನಲ್ಲಿ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ರಕ್ತ ದಾನ ಮಾಡುವುದರಲ್ಲಿ ಯಾವುದೇ ಅಪಾಯವಿಲ್ಲ ರಕ್ತವನ್ನು ಕೊಡುವುದರಿಂದ ನೂರಾರು ರೋಗಿಗಳಿಗೆ ಉಪಯೋಗವಾಗುತ್ತದೆ ಅದರಿಂದ ಸಾವಿರಾರು ಜನರ ಪ್ರಾಣವನ್ನು ಉಳಿಸಬಹುದು. ವರ್ಷದಲ್ಲಿ ಎರಡು ಬಾರಿ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗುತ್ತದೆ ಹೋದ ಬಾರಿ 71 ಯೂನಿಟ್ ರಕ್ತವನ್ನು ಸಂಗ್ರಹವಾಗಿತ್ತು. ಈ ಬಾರಿ 56 ಯೂನಿಟ್ ಅಷ್ಟು ರಕ್ತವನ್ನು ಸಂಗ್ರಹವಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ರಕ್ತವನ್ನು ನೀಡಿದರು ,ರಕ್ತ ನೀಡಿದವರಿಗೆ ಹಣಹಂಪಲು ಮತ್ತು ರೆಡ್ ಕ್ರಾಸ್ ಸಂಸ್ಥೆ ವತಿಯಿಂದ ಸರ್ಟಿಫಿಕೇಟ್ ಅನ್ನು ನೀಡಿದರು.
ಈ ಸಂದರ್ಭದಲ್ಲಿ ರೆಡ್ ಕ್ರಾಸ್ ಸಂಸ್ಥೆಯ ಅಧ್ಯಕ್ಷರಾದ ನಾರಾಯಣ ರೆಡ್ಡಿ ಭರತ್ ಕುಮಾರ್ ಶ್ರೀನಾಥ್ ಎಂ ರಘು ಸೇರಿದಂತೆ ಕಾಲೇಜಿನ ಎಲ್ಲರೂ ಭಾಗವಹಿಸಿದರು.