ವಿದ್ಯುತ್ ಸ್ವರ್ಶಿಸಿದ ಹಸು ಸಾವು..

228

ಮಂಡ್ಯ/ಮಳವಳ್ಳಿ:ವಿದ್ಯುತ್ ಕಂಬದಿಂದ ಸ್ವರ್ಶಿಸಿದ ಪರಿಣಾಮ ಹಸುಯೊಂದು ಸಾವನ್ನಪಿದ್ದ ಘಟನೆ ಮಳವಳ್ಳಿ ತಾಲ್ಲೂಕಿನ ಕೊನ್ನಾಪುರ ಗ್ರಾಮದಲ್ಲಿ ನಡೆದಿದೆ.ಗ್ರಾಮದ ರತ್ನಮ್ಮ ಎಂಬುವರಿಗೆ ಸೇರಿದ ಹಸು ಸಾವನ್ನಪ್ಪಿದ್ದುರತ್ಮಮ್ಮ ಹಸು ಮೇಯಿಸಲು ಹೋಗುತ್ತಿದ್ದಾಗ ಟ್ರಾಕ್ಟರ್ ಶಬ್ದಕ್ಕೆ ಬೆದರಿ ರಸ್ತೆಬದಿಯಲ್ಲಿದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆಯಿತು ಎನ್ನಲಾಗಿದೆ.ಆಕಸ್ಮಿಕವಾಗಿ ಕಂಬದಲ್ಲಿ ವಿದ್ಯುತ್ ಸಂಚರಿಸಿದ್ದು ಡಿಕ್ಕಿಹೊಡೆದ ಹಸು ಸ್ಥಳದಲ್ಲೇ ಸಾವನ್ನಪ್ಪಿತ್ತು.ರತ್ಮಮ್ಮ 50 ಸಾವಿರ ರೂ ಸಾಲ ಮಾಡಿ ಹಸುವನ್ನು ಖರೀದಿಸಿ ಅದರಿಂದ ಬಂದ ಹಾಲನ್ನು ಮಾರಿ ಜೀವನ ಸಾಗಿಸುತ್ತಿದ್ದಳು ಎನ್ನಲಾಗಿದೆ. ಜೀವನಾಧಾರವಾಗಿದ ಹಸುವಿನ ಸಾವಿನಿಂದ ಕಂಗಾಲಾಗಿದ್ದಾಳೆ . ಪರಿಹಾರ ನೀಡಬೇಕು ಎಂದು ರತ್ಮಮ್ಮ ಆಗ್ರಹ ಪಡಿಸಿದ್ದಾರೆ . ಈ ಸಂಬಂದ ಹಲಗೂರು ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಸ್ಥಳಕ್ಕೆ ಪಶು ಇಲಾಖೆ ಅಧಿಕಾರಿಗಳ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ