ಸಂಘಟನೆಗಳ ಹೋರಾಟ,ವಾಹಿನಿಯ ಸುದ್ದಿ ಫಲಶ್ರುತಿ..

765

ಚಿಕ್ಕಬಳ್ಳಾಪುರ/ಶಿಡ್ಲಘಟ್ಟ : ತಹಶೀಲ್ದಾರ್ ವರ್ಗಾವಣೆ ಸುದ್ದಿ ಫಲ ಶೃತಿ ಧಕ್ಷ ತಹಶೀಲ್ದಾರ್ ಅಧಿಕಾರಿಯಾಗಿ ಕೆಲಸ ಮಾಡುತ್ತಿರುವ ಅಜಿತ್ ಕುಮಾರ್ ರೈ ಅವರನ್ನು ತಾಲ್ಲೂಕಿನ ಜನತೆ ಮತ್ತಷ್ಟು ಅವರ ಸೇವೆ ಪಡೆಯಲು ನಡೆಸಿದ ಪ್ರತಿಭಟನೆಯ ಕೂಗು ಕೊನೆಗೂ ಸರ್ಕಾರಕ್ಕೆ ಮುಟ್ಟಿ ಅಧಿಕಾರಿಯ ವರ್ಗಾವಣೆ ರದ್ದು ಪಡೆಸಲು ಮಾಡಿದ ಹೋರಾಟ ಯಶಸ್ವಿಯಾಗಿದೆ.

ತಹಶಲ್ದಾರ್ ಅಜಿತ್ ಕುಮಾರ್ ರೈ ರನ್ನು ದಿಢೀರನೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದ ಸುದ್ದಿ ತಿಳಿದ ತಾಲೂಕಿನ ಸಂಘಟನೆಗಳು ಮತ್ತು ಪತ್ರಿಕಾ ಮಾದ್ಯಮ ದವರು ಈ ಕೂಡಲೇ ಆದೇಶವನ್ನು ರದ್ದುಗೊಳಿಸಿ ಶಿಡ್ಲಘಟ್ಟದಲ್ಲಿ ಅಧಿಕಾರಿಯನ್ನು ಕರ್ತವ್ಯದಲ್ಲಿ ಯಥಾಸ್ಥಿತಿ ಮುಂದುವರೆಯುವಂತೆ ಮನವಿಮಾಡಲಾಗಿ, ಜಿಲ್ಲಾಧಿಕಾರಿಗಳ ಆದೇಶದಂತೆ ಪನಃ ಅಧಿಕಾರವನ್ನು ಸ್ವೀಕರಿಸಿ ತಾಲ್ಲೂಕು ಕಛೇರಿಗೆ ಆಗಮಿಸಿ ಸಾರ್ವಜನಿಕರ ಕೆಲಸಗಳು ಮಾಡಲು ಮುಂದಾದ ತಹಶೀಲ್ದಾರ್ ಅಜಿತ್ ಕುಮಾರ್ ರೈ ಜನತೆ ನನ್ನಮೇಲೆ ಇಟ್ಟಿರುವ ಪ್ರೀತಿ ವಿಶ್ವಾಸಕ್ಕೆ ನಾನು ಋಣಿ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಹಲವಾರು ಪ್ರಗತಿ ಪರ ಸಂಘಟನೆಗಳು ಪ್ರತಿಭಟನೆ ಮಾಡುತ್ತಿದ್ದ ಸಮಯದಲ್ಲೇ ಅಜಿತ್ ಕುಮಾರ್ ರೈ ಆಗಮಿಸಿದರು. ಅವರ ಸೇವೆಯ ಉಳಿವಿಗೆ ಪ್ರತಿಭಟಿಸುತ್ತಿದ್ದ ಪ್ರತಿಭಟನಾಕಾರರು ಅವರನ್ನು ಕಂಡ ಕೂಡಲೆ ಜಯಘೋಷಗಳನ್ನು ಕೂಗಿ ಸಂಭ್ರಮಿಸಿದರು.
ಯಾವುದೇ ಕಾರಣಕ್ಕೂ ಇಂತ ಪ್ರಾಮಾಣಿಕ ಧಕ್ಷ ಅಧಿಕಾರಿ ತಹಶಿಲ್ದಾರ್ ಅಜಿತ್ ಕುಮಾರ್ ರೈ ರವರನ್ನು ವರ್ಗಾವಣೆ ಮಾಡಲು ಬಿಡುವುದಿಲ್ಲಾ, ಒಂದು ವೇಳೆ ಕಾಣದ ಕೈಗಳು ಪ್ರಯತ್ತಿಸಿದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಪ್ರತಿಭಟನಾಕಾರರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ತಾಲ್ಲೂಕಿನ ಅಭಿವೃದ್ಧಿಗೆ ಹೆಚ್ಚಿನ ರೀತಿಯಲ್ಲಿ ಸೇವೆ ಮಾಡುತ್ತಾ ಜನತೆಯ ಪ್ರೀತಿ ಗಳಿಸಿದ್ದಾರೆ. ಅವರ ಒಳ್ಳೆಯ ಕೆಲಸ ಕಾರ್ಯಗಳಿಗೆ ಹಾಗೂ ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುವ ಅಧಿಕಾರಿ ವಾಹಿನಿಯ ಜೊತೆ ಮಾತನಾಡುತ್ತಾ,
ಬಡ ಜನರ ಅಭಿವೃದ್ಧಿಯ ಜೊತೆಗೆ ತಾಲ್ಲೂಕಿನ ಅಭಿವೃದ್ಧಿಗೆ ಮತ್ತಷ್ಟು ಪ್ರಾಮಾಣಿಕ ಸೇವೆ ಮಾಡುವುದೇ ನನ್ನ ಆದ್ಯಕರ್ತವ್ಯ ಮತ್ತು ಅದೇ ನನ್ನ ಭಾಗ್ಯವಾಗಿದೆ ಎಂದು ತಹಶೀಲ್ದಾರ್ ಅಜಿತ್ ಕುಮಾರ್ ರೈ ಎಂದಿನಂತೆ ಕಛೇರಿಯಲ್ಲಿ ಕಾರ್ಯನಿರ್ವಹಿಸಲು ಮುಂದಾದರು.

ಪ್ರತಿಭಟನೆಯಲ್ಲಿ ದಲಿತ ಸಂಘರ್ಷ ಸಮಿತಿ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕೋಡಹಳ್ಳಿ ಚಂದ್ರಶೇಖರ್ ಮತ್ತು ಪುಟ್ಟಣ್ಣಯ್ಯ ಬಣ, ಕರವೇ ಪ್ರವೀಣ್ ಶೆಟ್ಟಿ ಬಣ, ದಲಿತ ಸೇನೆ, ಹಾಗೂ ಹಲವಾರು ಪ್ರಗತಿ ಪರ ಸಂಘಟನೆಗಳು ತಹಶೀಲ್ದಾರರ ವರ್ಗಾವಣೆ ರದ್ದುಪಡೆಸುವ ಪ್ರತಿಭಟನೆಯಲ್ಲಿ ಭಾಗವಹಿಸಿಗಿದ್ದರು.