ಸಹಕಾರ ಸಂಘಗಳ ವಿರುದ್ಧ ಮಹಿಳೆಯರಿಂದ ಪ್ರತಿಭಟನೆ..

288

ಕೋಲಾರ : ಸಾಲ ಕೊಡಿಸುವುದಾಗಿ ಸ್ತ್ರೀ ಶಕ್ತಿ ಸಂಘಗಳಿಂದ ತಲಾ ೫0 ಸಾವಿರ ಹಣ ಪಡೆದ ಸಹಕಾರ ಸಂಘದಿಂದ ವಂಚನೆ ಆರೋಪ ಮಹಿಳೆಯರ ಪ್ರತಿಭಟನೆ.ಕೋಲಾರ ತಾಲ್ಲೂಕಿನ ವಡಗೂರು ರೇಷ್ಮೆ ಬೆಳೆಗಾರರ ಸಹಕಾರ ಸಂಘದ ಬಾಗಿಲು ಮುಚ್ಚಿ ಪ್ರತಿಭಟನೆ ನಡೆಸುತ್ತಿರುವ ನೂರಾರು ಮಹಿಳೆಯರು.

ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಸ್ಥಿತಿ ನಿಭಾಯಿಸಲು ಹರ ಸಾಹಸ. ವಡಗೂರು ಮುಖ್ಯ ರಸ್ತೆಯಲ್ಲಿ ಧರಣಿ ಕುಳಿತು ಪ್ರತಿಭಟನೆ.
ವ್ಯವಸ್ಥಾಪಕ ವಿಜಯಕುಮಾರ್ ಹಾಗೂ ಸಹಾಯಕ ಮಂಜುನಾಥ್. ತಲಾ ಒಂದು ಸ್ತ್ರೀ ಶಕ್ತಿ ಸಂಘದಿಂದ ೫ ಸಾವಿರ ಡಿಪಾಸಿಟ್ ಹಾಗೂ ಖರ್ಚಿನ ಬಾಬತ್ತು ಎಂದು ತಲಾ ೩೫೦೦ ರೂಪಾಯಿ ಸೇರಿ ಪ್ರತಿಯೊಂದು ಸಂಘದಿಂದ ೮೫೦೦ ರೂಗಳಂತೆ ಸುಮಾರು ೨೫ ಕ್ಕೂ ಹೆಚ್ಚಿನ ಸಂಘಗಳಿಂದ ವಸೂಲಿ ಮಾಡಿದ ಸಹಕಾರ ಸಂಘದ ಸಿಬ್ಬಂದಿಗಳು. ಪ್ರತಿಭಟನೆ ವೇಳೆ ಕಚೇರಿಗೆ ಬೀಗ ಹಾಕಿ ಪರಾರಿ. ಸಹಕಾರ ಸಂಘದ ಮಾಜಿ ಅಧ್ಯಕ್ಷ ಡಿ.ಎಲ್.ನಾಗರಾಜ್ ಮನವೊಲಿಸಲು ಪ್ರಯತ್ನ. ಪಟ್ಟು ಬಿಡದ ಮಹಿಳೆಯರು ರಸ್ತೆ ಬಂದ್ ಮಾಡಿ ಪ್ರತಿಭಟನೆ.