“ಸಹಸ್ರ ದೀಪೋತ್ಸವ”ಕ್ಕೆ ಸಿದ್ದತೆ

296

ಕೋಲಾರ: ಶ್ರೀರಾಮ ಸೇನೆ ಕೋಲಾರ ಜಿಲ್ಲಾ ಘಟಕದ ವತಿಯಿಂದ ಮಹಾಶಿವರಾತ್ರಿ ಪ್ರಯುಕ್ತ ನಾಳೆ ಸಂಜೆ ೬.೦ಘಂಟೆಗೆ ಶ್ರೀ ಪಾರ್ವತಿ ಸಮೇತ ಸೋಮೇಶ್ವರ ಸ್ವಾಮಿ ದೇವಾಲಯದ ಪುಷ್ಕರಣಿ ಯಲ್ಲಿ ಲೋಕ ಕಲ್ಯಾಣಕ್ಕಾಗಿ ಮತ್ತು ಶಾಶ್ವತ ನೀರಾವರಿಗಾಗಿ “ಸಹಸ್ರ ದೀಪೋತ್ಸವ” ಕಾರ್ಯ ಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ನಾಳೆ ನಡೆಯುವ ದೀಪೋತ್ಸವ ಕಾರ್ಯಕ್ರಮಕ್ಕೆ ಇಂದು ಶ್ರೀರಾಮ ಸೇನಾ ಕಾರ್ಯಕರ್ತರು ಪುಷ್ಕರಣಿಯಲ್ಲಿ ಬೆಳೆದಿದ್ದ ಹುಲ್ಲು, ಗಿಡ ಗಂಟೆ ಗಳನ್ನು ತೆರವುಗೊಳಿಸಿ ಪುಷ್ಕರಣಿಯನ್ನು ಸ್ವಚ್ಛ ಗೊಳಿಸಿದರು.
ಈ ಕಾರ್ಯಕ್ಕೆ ಎಲ್ಲಾ ಭಕ್ತ ಮಹಾಶಯರು ದೈವ ಕಾರ್ಯದಲ್ಲಿ ಪಾಲ್ಗೊಳ್ಳವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಅಧ್ಯಕ್ಷರಾದ ರಮೇಶ್ ರಾಜ್ ,ತಾಲ್ಲೂಕು ಅಧ್ಯಕ್ಷ ಅರುಣ್, ಉಪಾಧ್ಯಕ್ಷ ಪ್ರವೀಣ್, ಕುರುಬರಪೇಟೆ ಕಿಶೋರ್,ನಾಗೆಂದ್ರ , ಸಂದೇಶ್,ಮಧು,ವಿಶ್ವಾಸ್,ಪ್ರಭಾಕರ್ ಕೋಟೆ ಅನಿಲ್,ಗೌರಿಪೇಟೆ ನವೀನ್,ಪೃಥ್ವಿ, ಮಣಿ ಮುಂತಾದ ಕಾರ್ಯಕರ್ತರು ಪಾಲ್ಗೊಂಡಿದ್ದರು.