ಸುಪ್ರೀಂ ಆದೇಶ,ಜಿ.ಪಂ ಅಧ್ಯಕ್ಷೆ ನಿರಾಳ

11867

ಬಾಗಲಕೋಟೆ: ಜಿಲ್ಲಾ ಪಂಚಾಯತ್ ಅದ್ಯಕ್ಷರ ಜಾತಿ ಪ್ರಮಾಣ ಪತ್ರ ವಿವಾದ ಪ್ರಕರಣಕ್ಕೆ ಸುಪ್ರೀಂ ತಡೆ ನೀಡಿ ಆದೇಶ ಹೊರಡಿಸಿದ್ದು ಜಿ.ಪಂ ಅಧ್ಯಕ್ಷೆ ವೀಣಾ ಕಾಶಪ್ಪನವರ್ ಅವರು ನಿಟ್ಟುಸಿರು ಬಿಡುವಂತೆ ಮಾಡಿದೆ. ಧಾರವಾಡ ಹೈಕೋರ್ಟ್ ನೀಡಿದ ಆದೇಶಕ್ಕೆ ಇದೀಗ ಸುಪ್ರೀಂಕೋರ್ಟ್ ತಡೆಯಾಜ್ಞೆ ಘೋಷಿಸಿದೆ.ಸುಪ್ರಿಂಕೋಟ೯ನ ನ್ಯಾಯಮೂತಿ೯ ಚಲಮೇಶ ನೇತೃತ್ವದ ದ್ವಿಸದಸ್ಯ ಪೀಠದ ಇಂದು ಮಹತ್ವದ ಆದೇಶ ಹೊರಡಿಸಿದ್ದು.

ಈ ಹಿಂದೆ ಜಿ.ಪಂ.ಅದ್ಯಕ್ಷೆ ವೀಣಾ ಕಾಶಪ್ಪನವರ ಜಾತಿ ಪ್ರಮಾಣ ಪತ್ರ ಅಸಿಂಧು ಎಂದು ಹೈಕೋರ್ಟ್ ತೀಪು೯ ನೀಡಿತ್ತು. ಜಿ.ಪಂ. ಸದಸ್ಯ ವೀರೇಶ ಉಂಡೋಡಿ ಸೇರಿದಂತೆ ಮೂವರು ಹೈಕೋರ್ಟ್ ಮೊರೆ ಹೋಗಿದ್ದರು.ತದನಂತರ ಹೈಕೋರ್ಟ್ ನೀಡಿದ ತೀಪ೯ನ್ನ ಪ್ರಶ್ನಿಸಿ ವೀಣಾ ಕಾಶಪ್ಪನವರ ಸುಪ್ರಿ೯ಂ ಕೋಟ೯ ಮೊರೆ ಹೋಗಿದ್ದರು.ಇಂದು ಹೈಕೋರ್ಟ್ ಆದೇಶಕ್ಕೆ ತಡೆಯಾಜ್ಞೆ ನೀಡಿ ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿದ್ದು ಜಿ.ಪಂ ಅಧ್ಯಕ್ಷೆ ವೀಣಾ ಕಾಶಪ್ಪನವರ್ ನಿಟ್ಟುಸಿರು ಬಿಡುವಂತೆ ಮಾಡಿದೆ.

ಬಾಗಲಕೋಟೆ ಜಿಲ್ಲೆಯ ಧನ್ನೂರ ಮತಕ್ಷೇತ್ರದಿಂದ ಆಯ್ಕೆಯಾಗಿದ್ದ ವೀಣಾ ಕಾಶಪ್ಪನವರ.ಚುನಾವಣೆ ವೇಳೆ ಹಿಂದುಳಿದ ಬ ವಗ೯ ಪ್ರಮಾಣ ಸಲ್ಲಿಸಿದ್ದರು ಇದು ವಿವಾದಕ್ಕೆ ಎಡೆ ಮಾಡಿಕೊಟ್ಟಿತ್ತು. ಇಂದು
ಸುಪ್ರೀಂ ಕೊರ್ಟ್ನ ಮಹತ್ತರ ತಿರ್ಪು ಹೊರಬಿಳುತ್ತಿದ್ದಂತೆ ಜಿಲ್ಲಾ ಪಂಚಾಯತ ಅಧ್ಯಕ್ಷೆ ಶ್ರೀಮತಿ ವೀಣಾ ಕಾಶಪ್ಪನವರ್ ನಿರಾಳರಾಗಿದ್ದು,ಕೋರ್ಟ್ ಆದೇಶವನ್ನ ಸ್ವಾಗತಿಸಿದ ಕಾಶಪ್ಪನವರ್ ಕುಟುಂಬ,ಕೈ ಕಾರ್ಯಕರ್ತರಲ್ಲಿ ಸಂತಸ ಹೆಚ್ಚಿಸಿದೆ..