ಸೌದಿಯಲ್ಲಿ ಚಿತ್ರಹಿಂಸೆ

547

ಕೆಲಸ ಕೊಡಿಸುವದಾಗಿ ಕರೆದುಕೊಂಡು ಹೋಗಿ ಚಿತ್ರಹಿಂಸೆ.

ಕೊಪ್ಪಳ: ಕೊಪ್ಪಳದ ಮಹಿಳೆಗೆ ಸೌದಿಯಲ್ಲಿ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿರುವ ಘಟನೆ ಬೆಳಕಿಗೆ ಬಂದಿದೆ. ಕೊಪ್ಪಳದ ಚಾಂದ್ ಸುಲ್ತಾನಾ ಚಿತ್ರಹಿಂಸೆ ಗೆ ಒಳಗಾಗಿರುವ ಮಹಿಳೆ. ಅರೆಬಿಕ್ ಕಲಿಸುವ ಕೆಲಸ ಕೊಡಿಸುವುದಾಗಿ ಹೇಳಿದ್ದ ಏಜೆಂಟ್ ಈಗ ಮನೆಗೆಲಸಕ್ಕೆ ಹಚ್ಚಿ ಮೋಸ ಮಾಡಿದ್ದಾನೆ ಎಂದು ಚಾಂದ್ ಸುಲ್ತಾನಾ ಪತಿ ಬಾಬಾ ಜಾನ್ ಹೇಳಿದ್ದಾರೆ. ಕೊಪ್ಪಳದ ನಿರ್ಮಿತಿ ಕೇಂದ್ರದ ಬಡಾವಣೆಯವರಾದ ಬಾಬಾಜಾನ್ ರಿಗೆ ದುಬೈನಲ್ಲಿ ಕೆಲಸ ಮಾಡುತ್ತಿರುವ ಸಯ್ಯದ್ ಎನ್ನುವ ಕೊಪ್ಪಳ ಮೂಲದ ವ್ಯಕ್ತಿ ದೂರದ ಸಂಬಂದಿಯಾಗಬೇಕು. ಈತ ಮಂಗಳೂರು ಮೂಲದ ಸಂಷೇರ್ ಎನ್ನುವ ಏಜೆಂಟ್ ನನ್ನು ಪರಿಚಯ ಮಾಡಿಸಿದ್ದಾನೆ. ಸಂಷೇರ್ ಈ ದಂಪತಿಗಳಿಗೆ ಪ್ರತಿ ತಿಂಗಳು ೪೦ ಸಾವಿರ ರೂಪಾಯಿಯ ಕೆಲಸ ಕೊಡಿಸುವುದಾಗಿ ನಂಬಿಸಿ ಕರೆದುಕೊಂಡು ಹೋಗಿದ್ದಾನೆ. ಬಾಬಾಜಾನ ಪತ್ನಿ ಚಾಂದ್ ಸುಲ್ತಾನರನ್ನು ಮೂರು ತಿಂಗಳ ಹಿಂದೆ ದುಬೈಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿಗೆ ಹೋದ ತಕ್ಷಣ ಮಾತನಾಡಿದ್ದ ಚಾಂದ್ ಸುಲ್ತಾನ ನಂತರ ಮಾತನಾಡಿಯೇ ಇಲ್ಲ. ನೂರಾರು ಸಲ ಪೋನ್ ಮಾಡಿದ ಮೇಲೆ ಎರಡು ದಿನದ ಹಿಂದೆ ಪರೀದಸಾಬ ಎನ್ನುವ ಶೇಕ್ ಮಾತನಾಡಲು ಅವಕಾಶ ಕೊಟ್ಟಿದ್ದಾನೆ. ಗೆಸ್ಟ್ ಹೌಸ್ ನಲ್ಲಿ ಕೂಡಿ ಹಾಕಿ ಊಟಕ್ಕೆ ಒಂದು ಬ್ರೇಡ್ ಎಸೆಯುತ್ತಿದ್ದಾರೆ . ಮನೆಗೆ ಫೋನು ಮಾಡುತ್ತೇನೆ ಎಂದು ಗೋಗೆರೆದರೂ ಫೋನು ಸಂಪರ್ಕ ಮಾಡಲು ಬಿಡುತ್ತಿಲ್ಲ ಎಂದು ಗಂಡನ ಬಳಿ ಚಾಂದಸುಲ್ತಾನ ದುಃಖ ತೋಡಿಕೊಂಡಿದ್ದಾಳೆ.
ಕೊಪ್ಪಳದಲ್ಲಿ ಇದೇ ರೀತಿ ನಾಲ್ಕೈದು‌ ಮಹಿಳೆ ಯರನ್ನು ಕರೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ‌. ಅಲ್ಲದೇ ಕೆಲಸ ಕೊಡಿಸುವುದಕ್ಕಾಗಿ ಏಜೆಂಟ್ ಗೆ ೫೦ ಸಾವಿರ ರೂಪಾಯಿ ಕೊಟ್ಟಿದ್ದಾರೆ. ಸೌದಿ ಅರೆಬಿಯಾದಲ್ಲಿ ಚಾಂದ್ ಸುಲ್ತಾನಾ ಕೆಲಸ ಮಾಡುತ್ತಿರುವ ಮನೆಯ ಮಾಲಿಕ ನಾನು ೪ ಲಕ್ಷ ಕೊಟ್ಟಿದ್ದೇನೆ ಅದು ಕೊಟ್ಟು ಹೋಗು ಎನ್ನುತ್ತಿದ್ದಾನೆ.
ಮನೆಯವರೊಂದಿಗೆ ಫೋನಿನಲ್ಲಿ ಮಾತನಾಡಲು ಅವಕಾಶ ನೀಡುತ್ತಿಲ್ಲ.
ಈ ಕುರಿತು ಕೊಪ್ಪಳ ಸಂಸದ ಸಂಗಣ್ಣ ಕರಡಿ ಮುಂದೆ ಗಂಡ ಬಾಬಾ ಜಾನ್ ಅಳಲು ತೊಡಿಕೊಂಡಿದ್ದಾರೆ. ಸಂಸದ ಕರಡಿ ಸಂಗಣ್ಣ ವಿದೇಶಾಂಗ ಸಚಿವರ ಗಮನಕ್ಕೆ ವಿಷಯ ತಂದು ಆದಷ್ಟು ಶೀಘ್ರವಾಗಿ ಕ್ರಮ ಕೈಗೊಳ್ಳಲು ಒತ್ತಾಯಿಸುತ್ತೇನೆ ಎಂದಿದ್ದಾರೆ.
ಈ ಕುರಿತು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ರೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲು ಒತ್ತಾಯ .

ಬೈಟ್ : ಅಲಿಶಾ (ಮಗಳು)
ಬೈಟ್ : ಬಾಬಾಜಾನ್ (ಗಂಡ)
ಬೈಟ್ : ಕರಡಿ ಸಂಗಣ್ಣ ( ಕೊಪ್ಪಳ ಸಂಸದ)