ಸ್ವಚ್ಚತೆ ಕಾಣದ ಬನ್ನಿಗೋಳ

1376

ಬಳ್ಳಾರಿ/ಹಗರಿಬೊಮ್ಮನಹಳ್ಳಿ: ತಾಲೂಕಿನ ಬನ್ನಿಗೋಳ ಗ್ರಾಮದಲ್ಲಿ ಸ್ವಚ್ಚತೆ ಎನ್ನುವ ಪದಕ್ಕೆ ಅರ್ಥ ಇಲ್ಲದಂತಾಗಿದ್ದು ಚರಂಡಿಗಳ ಹೂಳು ತುಂಬಿ ಕೊಳೆತು ನಾರುತ್ತಿದ್ದರೂ ಸಹ ಇದಕ್ಕೆ ಸಂಬದ ಪಟ್ಟ ಅಧಿಕಾರಿಗಳು ಹಾಗು ಜನಪ್ರ್ತಿನಿದಿಗಳು ಇತ್ತಗಮನ ಹರಿಸದೆ ಸಂಪೂರ್ಣ ನಿರ್ಲಕ್ಷ ವಹಿಸುತ್ತದ್ದಾರೆ ಚರಂಡಿಯ ತುಂಬಿದ್ದರಿಂದ ಕೆಟ್ಟವಾಸನೆ, ಸೊಳ್ಳೆಗಳ ಕಾಟ ಹೆಚ್ಚಾಗುತ್ತಿದ್ದು ಸಾಂಕ್ರಾಮಿಕ ರೋಗಗಳು ಬರಬಹುದಾದ ಎಲ್ಲಾ ಲಕ್ಷಣಗಳು ಇಲ್ಲಿ ಎದ್ದು ಕಾಣುತ್ತಿವೆ. ರೋಗಭೀತಿಯ ಆತಂಕದಲ್ಲಿ ಗ್ರಾಮಸ್ಥರು ಜೀವನ ಸಾಗಿಸುವ ಪರಿಸ್ಥಿತಿ ಎದುರಾಗಿದೆ. 

ಇನ್ನಾದರೂ ಇದಕ್ಕೆ ಸಂಬಂದ ಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿದಿಗಳು ಇತ್ತ ಗಮನಹರಿಸದಿದ್ದಲ್ಲಿ ಗ್ರಾಮಸ್ಥರು ಸ್ವಚ್ಚತೆಗಾಗಿ ಪ್ರತಿಭಟನೆಗೆ ಮುಂದಾಗಲಿದ್ದಾರೆ.