ಹಂಪಿಯಲ್ಲಿ ವಿದೇಶಿಗರ ರಂಗು ರಂಗಿನ ಹೋಳಿ

440

ಹೊಸಪೇಟೆ: ಹಂಪಿಯ ಸ್ಥಳೀಯರೊಂದಿಗೆ ರಂಗು ರಂಗಿನ ಹೋಳಿ ಆಡಿ ಸಂಭ್ರಮಿಸಿದ ನೂರಾರು ವಿದೇಶಿಗರುಇನ್ನು ಹೋಳಿಯಲ್ಲಿ ಫ್ರಾನ್ಸ್, ಜರ್ಮನ್, ರಷ್ಯಾ, ಫಿನ್ ಲ್ಯಾಂಡ್, ನೇಪಾಳ, ದಕ್ಷಿಣ, ಕೋರಿಯಾ, ಜಪಾನ್, ಇಟಲಿ, ಅಸ್ಟ್ರೇಲಿಯಾ, ಫೋರ್ಚಗಲ್, ಫೊಲೀಸ್, ನೆದರಲ್ಯಾಂಡ್, ನೂರಾರು ಪ್ರವಾಸಿಗರು ತಳ್ಳುಗಾಡಿಯಲ್ಲಿನ ತಮ್ಮ ಬೇಕಾದ ರಂಗನ್ನು ಖರೀದಿಸಿ ಸ್ಥಳೀಯರೊಂದಿಗೆ ಬೆರೆತು ಹೋಲಿ ಆಡಿದರು ಹಂಪಿಯ ಮಕ್ಕಳನ್ನು ತಮ್ಮ ಹೆಗಲ ಮೇಲೆ ಹೊತ್ತುಕೊಂಡು ಕುಣಿದು ಕುಪ್ಪಳಿಸಿದರು ಇನ್ನು ತಮ್ಮ ಪ್ರವಾಸದಲ್ಲಿ ಬಂದಿದ್ದ ಮಕ್ಕಳು ಸಹ ಹೋಲಿ ಸಂಭ್ರಮದಲ್ಲಿ ಮಿಂದೆದ್ದರು ಬೆಳಗ್ಗೆ ಎಂಟು ಗಂಟೆಗೆ ಆರಂಭವಾದ ಹೋಲಿ ಸಂಭ್ರಮ ಹಂಪಿಯ ಜನತಾ ಪ್ಲಾಟ್‍ನಲ್ಲಿ ಡಿ ಜೆ ಗೆ ಹೆಜ್ಜೆ ಹಾಕಿದರೆ ಇನ್ನುಳಿದವರು ತಮಗೆ ಇಷ್ಟವಾದ  ತಾಷಾರಾಂಡೋಲ್ ತಾಳಕ್ಕೆ ಹೆಜ್ಜೆ ಹಾಕುತ್ತಾ ವಿರುಪಾಕ್ಷಬಜಾರಿಗೆ ಬಂದು ಮತ್ತೆ ಮರಳಿ ಜನತಾಪ್ಲಾಟ ಸೇರಿದರು ಹಂಪಿಯ ನಂತರ ಈನಾಡು ಇಂಡಿಯಾ ನಮ್ಮ ಕನ್ನಡದೊಂದಿಗೆ ಹೋಲಿಯ ಖುಷಿಯನ್ನು ಹಂಚಿಕೊಂಡರು ಹೋಳಿಯಲ್ಲಿ ಅತಿ ಹೆಚ್ಚು ವಿದೇಶಿಗರು ಭಾಗವಹಿಸುವುದರಿಂದ ಹಂಪಿ ಉಪ ವಿಭಾಗದ ಡಿವೈಎಸ್ಪಿ ಹೊನವಾಡ್ಕರ್, ಸಿಪಿಐ ಕೆ.ಪಿ ರವಿ, ಪಿಎಸೈ, ಮರಿಯಪ್ಪ ಹಾಗು ಸಂಚಾರಿ ಠಾಣೆಯ ಪೊಲೀಸರು ಸೂಕ್ತ ಬಂದೋಬಸ್ತ್ ಕೈಗೊಂಡಿದ್ದರು.