ಹುಟ್ಟುಹಬ್ಬ ಆಚರಿಸಿಕೊಳ್ಳುವ ಯುವಕರಿಗೆ ಮಾದರಿ

476

ಬಳ್ಳಾರಿ /ಹೊಸಪೇಟೆ ನಗರದಲ್ಲಿ ಭಾರತ ಭಾವೈಕ್ಯತಾ ಸಮಿತಿ ತನ್ನ ವಿಭಿನ್ನ ಕಾರ್ಯಕ್ರಮಗಳ ಮೂಲಕ ಸಾಮಾಜಿಕ ಕಾಳಜಿ ಮೂಡಿಸುವತ್ತ ಹೆಜ್ಜೆ ಇಡುತ್ತಿದೆ, ಇದೇ ನಿಟ್ಟಿನಲ್ಲಿ ಡೆಂಗ್ಯೂ ಜ್ವರದ ಹಾವಳಿ ಹೆಚ್ಚಾಗಿರುವುದು ಎಲ್ಲರಿಗೂ ತಿಳಿದೇಯಿದೆ. ಸೊಳ್ಳೆಗಳಿಂದ ನಮ್ಮ ನಮ್ಮ ಮಕ್ಕಳನ್ನ, ಕುಟುಂಬವನ್ನ ರಕ್ಷಿಸಿಕೊಳ್ಳಲು ಮುಂದಾಗುವುದು ಸಹಜ ಆದರೆ ಅನಾಥ ಮಕ್ಕಳ ಆರೋಗ್ಯದ ಕಾಳಿಜಿ ಹೇಗೆ ಎಂದು ಚಿಂತಿಸಿದ ಸಮಿತಿಯ ಸಂಘಟನಾ ಕಾರ್ಯದರ್ಶಿಯಾದ ಸುಭೇದಾರ್. ವೇಣುಗೋಪಾಲ ತಮ್ಮ ಹುಟ್ಟು ಹಬ್ಬವನ್ನ‌ ಕಾರುಣ್ಯ ಅನಾಥಾಶ್ರಮದ ಮಕ್ಕಳ್ಳಿಗೆ ಸೊಳ್ಳೆ ಪರದೆಗಳನ್ನ ವಿತರಿಸುವ ಮೂಲಕ ಅರ್ಥಪೂರ್ಣವಾಗಿ ಹುಟ್ಟಿದ ದಿನವನ್ನ ಆಚರಿಸಿಕೊಂಡರು.

ಅಥಿತಿಗಳಾಗಿ ಆಗಮಿಸಿದ್ದ ವಕೀಲರು ಹಾಗು ಕರುನಾಡ ಕಲಿಗಳ ಕ್ರಿಯಾಶೀಲ ಸಮಿತಿಯ ಅಧ್ಯಕ್ಷರು ಆದ ಪಿ.ವೆಂಕಟೇಶ್ ಮಾತನಾಡಿ ಇಂದಿನ ಯುವ ಜನಾಂಗ ತಮ್ಮ ಹುಟ್ಟುಹಬ್ಬವನ್ನ ಮೋಜು ಮಸ್ತಿ ಮಾಡಿ ಸಾವಿರಾರು ರೂಪಾಯಿಗಳನ್ನ ಪೋಲು ಮಾಡಿ ತಮ್ಮ ಆರೋಗ್ಯವನ್ನು ಮತ್ತು ಕುಡಿತದ ಮತ್ತಿನ ಅಮಲಿನಲ್ಲಿ ಜೀವಗಳನ್ನು ಕಳೆದುಳ್ಳುತ್ತಾರೆ ಆದರೆ ಈ ಭಾರತ ಭಾವೈಕ್ಯತಾ ಸಮಿತಿಯ ಯುವಕರು ಅನಾಥ ಮಕ್ಕಳ ಆರೋಗ್ಯ ಕಾಳಜಿ ಇಟ್ಟುಕೊಂಡು ಮೋಜು ಮಸ್ತಿ ಮಾಡುವ ಬದಲು ಈ ರೀತಿಯ ಕಾರ್ಯ ಕೈಗೊಂಡಿರುವುದು ಯುವ ಸಮುದಾಯಕ್ಕೆ ಮಾದರಿ ಎಂದು ಹರ್ಷ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷ ಗುಜ್ಜಲ್ .ಅಯ್ಯಣ್ಣ, ಸಂ.ಕಾರ್ಯದರ್ಶಿ ವೇಣುಗೋಪಾಲ, ಬೆಳಗೋಡ್.ಹುಲುಗಪ್ಪ, ಸಂದೀಪ್, ಬೆಳಗೋಡ್.ರಾಘು, ರಾಜು, ಹೆಬ್ಬಾಳ್. ಮಂಜು ಮತ್ತಿತರರು ಹಾಜರಿದ್ದರು.