ಹೋಟೆಲ್ ಕಾರ್ಮಿಕರ ಮೇಲೆ ಹಲ್ಲೆ, ಕಟ್ಟಡ ದ್ವಂಸ

282

ಬೆಂಗಳೂರು:  ದಿನದಿಂದ ದಿನಕ್ಕೆ ಕಳ್ಳತನ, ದರೋಡೆ, ಹಲ್ಲೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ರಾಜಾರೋಷವಾಗಿ ಬಂದ 40 ಮಂದಿ ದುಷ್ಕರ್ಮಿಗಳ ಗುಂಪು ಹೋಟೆಲ್ನಲ್ಲಿ ಮಲಗಿದ್ದ ಕಾಮರ್ಿಕರ ಮೇಲೆ ಹಲ್ಲೆ ನಡೆಸಿ, ಅವ್ಯಾಚ್ಚ ಶಬ್ದಗಳಿಂದ ನಿಂದಿಸಿದ್ದಲ್ಲದೆ ಹೋಟೆಲ್ ದ್ವಂಸ ಮಾಡಿದ್ದಾರೆ.  ಈ ಘಟನೆ ನಡೆದಿರುವುದಾದರು ಎಲ್ಲಿ ಅಂತೀರ ಈ ಸ್ಟೋರಿ ನೋಡಿ

ರೌಡಿಗಳ ಗುಂಪೊಂದು ರಾತ್ರೊ ರಾತ್ರಿ ಹೋಟೆಲ್ ಹಾಗೂ ಅಂಗಡಿಗಳಿಗೆ ನುಗ್ಗಿ ಕಾಮರ್ಿಕರನ್ನು ಅವ್ಯಾಚ್ಚ ಶಬ್ದಗಳಿಂದ ನಿಂದಿಸಿ, ಅವರ ಮೇಲೆ ಹಲ್ಲೆ ನಡೆಸುತ್ತಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿರುವ ದೃಶ್ಯಗಳು ಕಂಡುಬಂದ್ದು ಬೆಂಗಳೂರಿನ ಮಾರತ್ತಹಳ್ಳಿ ಪೊಲೀಸ್ ಠಾಣ ವ್ಯಾಪ್ತಿಯ ಕುಂದಲಹಳ್ಳಿಯಲ್ಲಿ. ಅಂದಹಾಗೆ ಭಾನುವಾರ ರಾತ್ರಿ 30 ರಿಂದ 40 ಜನರ ರೌಡಿಗಳ ಗುಂಪು ಇಲ್ಲಿನ ಮಂಜುನಾಥ ಹೋಟೆಲ್, ಗಣೇಶ್ ಜ್ಯೂಸ್ ಸೆಂಟರ್, ಮಂಜುನಾಥ ಸ್ಟೋರ್ಸ್ ಸೇರಿದಂತೆ ನಾಲ್ಕೈದು ಅಂಗಡಿಗಳಿಗೆ ನುಗ್ಗಿ ಕೈಗೆ ಸಿಕ್ಕ ವಸ್ತುಗಳನ್ನು ಕದ್ದು, ಅಂಗಡಿಯಲ್ಲಿದ್ದವರ ಮೇಲೆ ಹಲ್ಲೆ ನಡೆಸಿ, ಅಂಗಡಿಗಳು ಹಾಗೂ ಹೋಟೆಲ್ ಕಟ್ಟಡಗಳನ್ನು ದ್ವಂಸ ಗೊಳಿಸಿದ್ದಾರೆ

ಇನ್ನು ಈ ಜಾಗಕ್ಕೆ ಸಂಬಂದಿಸಿದಂತೆ ಕೆಲವು ವ್ಯಕ್ತಿಗಳ ನಡುವೆ ಜಮೀನು ವ್ಯಾಜ್ಯವಿದ್ದು ಈ ಬಗ್ಗೆ ಕೋಟರ್್ನಲ್ಲಿ ಕೇಸ್ ನಡೆಯುತ್ತಿದೆ. ಕೋಟರ್್ ತೀಪರ್ು ಹೊರಬೀಳುವ ಮುನ್ನವೆ ವಿಜಯ್ ಕುಮಾರ್ ರೆಡ್ಡಿ ಹಾಗೂ ಅವರ ಬೆಂಲಿಗರು ಈ ರೀತಿ ಕ್ರೂರಿಗಳಂತೆ ವತರ್ಿಸಿದ್ದಾರೆ. ಈ ಸಂಬಂದ ಹೆಚ್.ಎ.ಎಲ್ ಪೊಲೀಸ್ ಠಾಣೆಯಲ್ಲಿ ರಾಬರಿ, ಅತಿಕ್ರಮ ಪ್ರವೇಶ ಸಂಬಂದ 307 ಕೇಸ್ ದಾಖಲಾಗಿದ್ದು, ನಿನ್ನೆ 5 ಜನರನ್ನು ಬಂದಿಸಿರುವ ಪೊಲೀಸರು ಕೃತ್ಯಕ್ಕೆ ಬಳಸಿದ್ದ ಒಂದು ಜೆಸಿಬಿ ಹಾಗೂ ಒಂದು ಟ್ರಾಕ್ಟರ್ ವಶಪಡಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ

ಒಟ್ಟಾರೆ ಬೆಂಗಳೂರಿನಲ್ಲಿ ದಿನೆ ದಿನೆ ಇಂತಹ ಅಪರಾದ ಕೃತ್ಯಗಳು ಹೆಚ್ಚಾಗುತ್ತಿದ್ದು, ಇದೀಗ ಭೂ ಮಾಲಿಕರ ಜಗಳದಿಂದ ಬಡಪಾಯಿ ಅಂಗಡಿ ಹಾಗೂ ಹೋಟೆಲ್ ಮಾಲಿಕರುಗಳಿಗೆ ತೊಂದರೆ ಉಂಟಾಗಿದ್ದು, ಇವರುಗಳಿಗೆ ಪೊಲೀಸರು ನ್ಯಾಯ ಒದಗಿಸಿಕೊಡುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ