ಗತಿಗೆಟ್ಟ ಆಸ್ಪತ್ರೆ,ಮತಿಗೆಟ್ಟ ವೈದ್ಯರು..

255

ಬಳ್ಳಾರಿ:ಅಪರೇಷನ್ ಮಾಡಿಸಿಕೊಂಡ ರೋಗಿಗಳಿಗೆ ಮಲಗಲು ಬೆಡ್ ಇಲ್ಲದೆ ಒಂದೇ ಬೆಡ್ಡಿನಲ್ಲಿ ಮಾರ್ನಾಲ್ಕು ಜನ್ರು ಕೂತು ಹಾಗೇ ನಿದ್ದೆ ಮಾಡಿದ ಘಟನೆ ಗಣಿನಾಡು ಬಳ್ಳಾರಿಯ ಪ್ರತಿಷ್ಟಿತ ವಿಮ್ಸ್ ಆಸ್ಪತ್ರೆಯಲ್ಲಿ ನಡೆದಿದೆ. ನಾನಾ ಆಪರೇಷನ್ ಗಳಿಗೋಸ್ಕರ ಬಂದಿದ್ದ ರೋಗಿಗಳು ಆಪರೇಷನ್ ಮಾಡಿಸಿಕೊಂಡಿದ್ದಾರೆ. ನಂತರ ಎಲ್ಲಾ ರೋಗಿಗಳಿಗೆ ಮಲಗಲು ಬೆಡ್ ಇಲ್ಲದ ಕಾರಣ ವೈದ್ಯರು ಅಲ್ಲೆ ಇದ್ದ ಮುರಕಲು ಬೆಡ್ಡಿನಲ್ಲೆ ಡ್ರಿಪ್ಸ್ ಕೂಡಿಸಿದ್ದಾರೆ ಇದು ರೋಗಿಗಳ ಸಂಬಂಧಿಕರ ಆಕ್ರೋಶಕ್ಕೆ ಕಾರಣವಾಗಿದೆ. ಇನ್ನೂ ಇದರ ಬಗ್ಗೆ ವೈದ್ಯರಿಗೆ ಕೇಳಿದರೆ ನಮ್ಮನು ಏನ್ ಕೇಳುತ್ತೀರ ಡೈರೆಕ್ಟರ್ ನ್ನು ಕೇಳಿ, ಅವರು ಕೊಟ್ರೇ ತಾನೆ ನಾವು ಕೆಲಸ ಮಾಡುವುದು ಎಂದು ಅವಾಜ್ ಕೂಡ ಹಾಕಿದ್ದಾರೆ. ಇದರಿಂದ ಮನನೊಂದ ರೋಗಿಯ ಸಂಬಂಧಿ ಫೋಟೊ ತೆಗೆದು ಮಾಧ್ಯಮಗಳಿಗೆ ನೀಡಿದ್ದಾರೆ