ತಪ್ಪು ನಮ್ಮದಲ್ಲಾ…ತಪ್ಪಿತಸ್ಥರ ವಿರುದ್ದ ದೂರು ನೀಡಿದ್ದೇವೆ

292

ಬೆಂಗಳೂರು ಗ್ರಾಮಾಂತರ/ದೊಡ್ಡಬಳ್ಳಾಪುರ: ಇತ್ತಿಚಿಗೆ ನಮ್ಮೂರು ನಂದಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ರೋಗಿಯೊಬ್ಬರಿಗೆ ಹುಳುಗಳಿಂದ ಕೂಡಿದ ಗ್ಲುಕೋಸ್ ನೀಡಿದರು ಎಂಬ ಆರೋಪದ ಹಿನ್ನೆಲೆಯಲ್ಲಿ ಮುದ್ರಣ ಮತ್ತು ದೃಶ್ಯ ಮಾದ್ಯಮದಲ್ಲಿ ಸುದ್ದಿ  ಭಿತ್ತರವಾದ ಹಿನ್ನೆಲೆಯಲ್ಲಿ ಇಂದು  ನಂದಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಮತ್ತು ಭಾರತೀಯ ವೈದ್ಯಕೀಯ ಸಂಘದವರು ತಮ್ಮ ಕಛೇರಿಯಲ್ಲಿ ಪತ್ರಿಕಾಗೋಷ್ಠಿಯನ್ನು ಆಯೋಜಿಸಿ ಮಾತನಾಡಿದರು

ಮೊನ್ನೆ ನಡೆದ ಘಟನೆಯಲ್ಲಿ  ತಪ್ಪು ನಮ್ಮದಲ್ಲ…,ನಮಗೆ ಔಷಧಿ ಸರಬರಾಜು ಮಾಡಲಾಗಿದ್ದ ಕಂಪೆನಿಯವರದ್ದು. ಅವಧಿ ಮುಗಿದಿದ್ದ ಒಂದು ಗ್ಲುಕೋಸ್(ಇಂಜೆಕ್ಷನ್)ಬಾಟಲ್  ದೊರಕಿದ್ದು ಸಮಯ ಪ್ರಜ್ಞೆ ಯಿಂದ ನಮ್ಮ ನರ್ಸ್ ಒಬ್ಬರು ಅದನ್ನು ರೋಗಿಗೆ ನೀಡದೆ ವೈದ್ಯರಿಗೆ ಮತ್ತು ಆಸ್ಪತ್ರೆ ಆಡಳಿತದ ಗಮನಕ್ಕೆ ತಂದಿದ್ದು ಔಷದಿ ಸರಬರಾಜು ಮಾಡಿದ ಕಂಪನಿ ವಿರುದ್ಧ ಈಗಾಗಲೇ ದೂರು ನೀಡಿದ್ದೇವೆ ಮತ್ತು ಈ ವಿಚಾರವಾಗಿ ಡಿಹೆಚ್ಒ ನಮಗೆ ನೀಡಿದ್ದ ನೋಟಿಸಿಗೆ ಉತ್ತರಿಸಿದ್ದೇವೆ  ಎಂದು ಸ್ಪಷ್ಟ ಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಭಾರತೀಯ ವೈದ್ಯಕೀಯ ಸಂಘದ ಸದಸ್ಯರು ಮತ್ತು ನಂದಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ವೈದ್ಯರು ಭಾಗವಹಿಸಿದ್ದರು.