ತಾಲ್ಲೂಕು ವೈದ್ಯಾಧಿಕಾರಿ ವಿರುದ್ಧ ಪ್ರತಿಭಟನೆ

261

ಬೆಂಗಳೂರು ಗ್ರಾಮಾಂತರ/ದೊಡ್ಡಬಳ್ಳಾಪುರ: ಜಯಕರ್ನಾಟಕ ಸಂಘಟನೆ ವತಿಯಿಂದ ತಾಲ್ಲೂಕು ಕಚೇರಿ ಮುಂದೆ ತಾಲ್ಲೂಕು ವೈದ್ಯಾಧಿಕಾರಿ ಶರ್ಮಿಳಾಹೆಡೆ ವಿರುದ್ಧಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯಲ್ಲಿ ಮಾತನಾಡಿದ ಸಂಘಟನೆಯ ತಾಲ್ಲೂಕು ಅಧ್ಯಕ್ಷ ಎ.ನಂಜಪ್ಪ ಇತ್ತೀಚೆಗೆ ನಗರದಲ್ಲಿ ಹೆಚ್ಚುತ್ತಿರುವ ಮಾರಣಾಂತಿಕ ಚಿಕೂನ್ ಗುನ್ಯ, ಡೆಂಘಿ ,ಮಲೇರಿಯಾ ಸೇರಿದಂತೆ ಅನೇಕ ರೀತಿಯ ಖಾಯಿಲೆಗಳಿಂದ ಜನಸಾಮಾನ್ಯರು ತತ್ತರಿಸುತ್ತಿದ್ದರೂ ಜವಾಬ್ದಾರಿ ಮರೆತ ತಾಲ್ಲೂಕು ವೈದ್ಯಾಧಿಕಾರಿ ಶರ್ಮಿಳಾಹೆಡೆ ಘಾಡನಿದ್ದೆಯಲ್ಲಿದ್ದಾರೆ. ತಾಲ್ಲೂಕು ಮತ್ತು ನಗರದಲ್ಲಿ ಚಿಕೂನ್ ಗುನ್ಯ ಮತ್ತು ಡೆಂಘಿ ಜ್ವರ ತಡೆಗಟ್ಟುವ ಯಾವುದೇ ರೀತಿಯ ಮುಂಜಾಗ್ರತಾ ಕ್ರಮ ವಹಿಸದೆ ತೀವ್ರ ನಿರ್ಲಕ್ಷದಿಂದಾ ತಮ್ಮ ಜವಾಬ್ದಾರಿ ಮರೆತಿದ್ದಾರೆ ಎಂದರು.ಇತ್ತೀಚೆಗೆ ನಗರದ ಹೃದಯಭಾಗದಲ್ಲೇ ೧೯ ವರ್ಷದ ಯುವಕನೋರ್ವ ಡೆಂಘಿ ಜ್ವರದಿಂದ ಸಾವನ್ನಪ್ಪಿದ ರೂ ಎಚ್ಚೆತ್ತುಕೊಳ್ಳದ ಇಂಥಹ ಅಧಿಕಾರಿಗಳು ನಮ್ಮೂರಿಗೆ ಅವಶ್ಯಕತೆಯಿಲ್ಲ ಎಂದು ತಮ್ಮ ಆಕ್ರೋಷ ವ್ಯಕ್ತಪಡಿಸಿದರು. ತಾಲ್ಲೂಕು ವೈದ್ಯಾಧಿಕಾರಿ ಕೇವಲ ತಮ್ಮ ಅಧಿಕಾರ ದುರುಪಯೋಗ ಪಡೆಸಿಕೊಂಡು ಖಾಸಗೀ ಆಸ್ವತ್ರೆಗಳಿಂದ ಮತ್ತು ನಕಲಿ ವೈದ್ಯರಿಂದ ಮಂತ್ಲಿ ವಸೂಲಿ ಮಾಡಿಕೊಳ್ಳುತ್ತಿದ್ದಾರೆ? ಎಂಬ ಗಂಭೀರ ಆರೋಪ ಕೇಳಿಬರುತ್ತಿರುವ ಈಕೆಯ ವಿರುದ್ಧ ಮೇಲಧಿಕಾರಿಗಳು ತನಿಖೆ ನಡೆಸಿ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು. ಸರಿಸುಮಾರು ಹತ್ತು ವರ್ಷಗಳಿಂದಾ ಇದೇ ತಾಲೂಕಿನಲ್ಲಿ ನೆಪಮಾತ್ರಕ್ಕೆ ಕಾರ್ಯನಿರ್ವಹಿಸುತ್ತಿರುವ ಈಕೆಯ ವಿರುದ್ಧ ಸಾಕಷ್ಟು ಆರೋಪಗಳಿದ್ದರೂ ಅದ್ಯಾರ ದಯೆಯಿಂದ ಇಡೀತಾಲ್ಲೂಕಿನ ವೈದ್ಯಕೀಯ ಜವಾಬ್ದಾರಿಯನ್ನು ಈಕೆಗೆ ಒಪ್ಪಿಸಿದ್ದಾರೋ ಗೊತ್ತಿಲ್ಲಾವೊಟ್ಟಾರೆ ಇಂಥಹ ಬೇಜಬ್ದಾರಿ ಅಧಿಕಾರಿ ದೊಡ್ಡಬಳ್ಳಾಪುರ ತಾಲೂಕಿಗೆ ದೊರೆತಿರುವುದು ಒಂದಿ ದೌರ್ಭಾಗ್ಯದ ಸಂಗತಿ ಎಂದರೂ ತಪ್ಪಾಗಲಾರದು.
ಇವರನ್ನು ತಾಲ್ಲೂಕಿನಿಂದ ಕೂಡಲೇ ಎತ್ತಂಗಡಿ ಮಾಡಿ ಸರ್ಕಾರಿ‌ ಆಸ್ಪತ್ರೆಯಲ್ಲಿ ಜನಸಾಮಾನ್ಯರಿಗೆ ಸೂಕ್ತ ಚಿಕಿತ್ಸೆ ದೊರೆಯುವಂತೆ ಅನುಕೂಲ ಮಾಡಿಕೊಡಬೇಕೆಂದು ತಾಲ್ಲೂಕು ದಂಡಾಧಿಕಾರಿ ಮೋಹನ್ ರವರಿಗೆ ಮನವಿ ಪತ್ರನೀಡಿದರು.

ಮನವಿ ಪತ್ರಸ್ವೀಕರಿಸಿದ ತಹಶಿಲ್ದಾರ್ ಮೋಹನ್ ರವರು ಮಾತನಾಡಿ ತಾಲ್ಲೂಕಿನಲ್ಲಿ ಇತ್ತೀಚಿನ ವೈದ್ಯಕೀಯ ಇಲಾಖೆಯ ದೂರುಗಳ ಮಹಾಪೂರ ನಮ್ಮ ಗಮನಕ್ಕೂ ಬಂದಿದ್ದು ಈಗಾಗಲೇ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳೊಂದಿಗೆ ಚರ್ಚಿಸಲಾಗುತ್ತಿದೆ.ಈ ನಿಮ್ಮ ದೂರಿನ ಹಿನ್ನಲೆಯಲ್ಲಿ ಶನಿವಾರ ಸಂಬಂಧಪಟ್ಟ ಅಧಿಕಾರಿಗಳನ್ನು ಸಭೆಕರೆದು ಸಮಸ್ಯೆ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಪಡುವುದಾಗಿ ಬರವಸೆ ನೀಡಿದ್ದಾರೆ.