ಮಹಿಳಾ ಸಂಘಗಳಿಗೆ ಬಡ್ಡಿರಹಿತ ಸಾಲ..

251

ಕೋಲಾರ :ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನೀ. ವತಿಯಿಂದ ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ನರಸಾಪುರ ವ್ಯಾಪ್ತಿಗೆ ಬರುವ ಹಳ್ಳಿಗಳ ಮಹಿಳಾ ಸ್ವಸಹಾಯ ಸಂಘಗಳಿಗೆ ಬಡ್ಡಿರಹಿತ ಸಾಲ ವಿತರಣೆ ಮಾಡಿದರು.

ಸುಮಾರು ೧೨೦ ಕ್ಕೂ ಹೆಚ್ಚು ಸಂಘಗಳಿಗೆ ೧ ಕೋಟಿ ೩೮ ಲಕ್ಷ ಸಾಲ ವಿತರಣೆ ಮಾಡೋ ಮಾತನಾಡಿದ ಅಧ್ಯಕ್ಷರಾದ ಬ್ಯಾಲಹಳ್ಳಿ ಗೋವಿಂದಗೌಡ ಲಕ್ಷಾಂತರ ಮಹಿಳೆಯರಿಗೆ ಇದರಿಂದ ನೆರವಾಗುತ್ತಿದೆ.ಇದೊಂದು ಆಂದೋಲನದ ರೀತಿಯಲ್ಲಿ ಬದಲಾಗಬೇಕು.ಇಡೀ ರಾಜ್ಯದಲ್ಲೇ ಅತಿ ಹೆಚ್ಚು ಮಹಿಳಾ ಸಂಘಗಳಿಗೆ ಯಾವುದೇ ಆಧಾರವಿಲ್ಲದೆ ಹೆಚ್ಚು ಸಾಲ ನೀಡಿರುವ ಪ್ರಥಮ ಜಿಲ್ಲೆ ನಮ್ಮದು.ಇದಕ್ಕೆಲ್ಲ ನಿಮ್ಮ ಸಹಕಾರವೇ ಪ್ರಮುಖ ಕಾರಣ.ಯಾವುದೇ ಕಾರಣಕ್ಕೂ ಮಧ್ಯವರ್ತಿಗಳ ಬಳಿ ಹೋಗದೆ ನೇರವಾಗಿ ಬ್ಯಾಂಕಿಗೆ ಬಂದು ನಿಮ್ಮ ಯಾವುದೇ ಸಮಸ್ಯೆಗಳುದ್ದರು ಬಗೆಹರಿಸಿಕೊಳ್ಳಿ ಎಂದು ಸ್ವಸಹಾಯ ಸಂಘದ ಸದಸ್ಯರಿಗೆ ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ನಿರ್ದೇಶಕರಾದ ದಯಾನಂದ್,ಸೋಮಣ್ಣ,ಶಿವಾರೆಡ್ಡಿ,ವಾಸುದೇವ,ಈರಣ್ಣ ಮುಂತಾದವರು ಇದ್ದರು.