ವಿಧ್ಯಾರ್ಥಿಗಳಿಗೆ ದಿನಪತ್ರಿಕೆ ಮಹತ್ವ..

274

ಚಿಕ್ಕಬಳ್ಳಾಪುರ/ಬಾಗೇಪಲ್ಲಿ:ಮಕ್ಕಳು ತಮ್ಮ ವಿಧ್ಯಾರ್ಥಿ ಜೀವನದಲ್ಲಿ ಮುಂದೆ ಗುರಿ ಹಿಂದೆ ಗುರುಗಳು ಇರಬೇಕು ಎಂದು ಕರೆ ನೀಡಿದರು. ಅವರು ಇಂದು ಸಂಯಮ ಶಾಲೆ ಯಲ್ಲಿ ಅಯೋಜಿಸಲಾಗಿದ್ದ ” ದಿನ ಪತ್ರಿಕೆ ಗಳನ್ನು ಏಕಕಾಲದಲ್ಲಿ ವಿಧ್ಯಾರ್ಥಿಗಳು ಓದುವುದು ಹಾಗೂ ದಿನಪತ್ರಿಕೆ ಗಳ ಮಹತ್ವ ” ಉದ್ದೇಶಿ ಮಾತನಾಡಿದರು ವಿಧ್ಯಾರ್ಥಿ ಜೀವನವು ಅತ್ಯಂತ ಮಹತ್ವ ವಾಗಿದ್ದು ಅದನ್ನು ಸೂಕ್ತ ರೀತಿಯಲ್ಲಿ ಉಪಯೋಗಿಸಿಕೊಂಡು ಉತ್ತಮ ಪ್ರಜೆಗಳಾಬೇಕು ಎಂದರು. ಅಲ್ಲದೆ ನಾನು ತುಂಬ ಬಡತನದ ಜೀವನವನ್ನು ಹತ್ತಿರದಿಂದ ನೋಡಿದವನು ಅದರೂ ಓದಿನ ವಿಚಾರದಲ್ಲಿ ನಾವು ಪ್ರೀತಿಯಿಂದ ಓದಿದರಿಂದ ಈ ದಿನ ನಾವು ಉತ್ತಮ ವಾದ ಸ್ಥಾನವನ್ನು ಪಡೆದಿದ್ದೇವೆ. ನೀವು ಪುಸ್ತಕದ ಬದನೆಯಕಾಯಿ ಯಾಗದೆ ಸಾಮಾನ್ಯ ಜ್ಞಾನ ದ ವಿಷಯ ಗಳನ್ನು ಅಧ್ಯಯನ ಮಾಡಿ .ಐ.ಎ.ಎಸ್.ಐ.ಪಿ.ಎಸ್. ಕೆ.ಎ.ಎಸ್ ಗಳನ್ನು ಪಡೆಯಬೇಕು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಪತ್ರಕರ್ತ ಸಂಘದ ಗೌರವ ಅಧ್ಯಕ್ಷ ಡಿ.ಎನ್ .ಕ್ರಷ್ಣರೆಡ್ಡಿ, ಗ್ರಿನ್ ಇಂಡಿಯಾ ಪೋರಂ ಅಧ್ಯಕ್ಷ ಸಿದ್ದಿಕ್, ಶಾಲೆಯ ಮುಖ್ಯ ಸ್ಥ ಕಿಶೋರ್, ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎ.ಜಿ.ಸುಧಾಕರ್, ಮುನಿರಾಮಯ್ಯ, ಕನ್ನಡ ಕಲಾ ಸಂಘದ ರಾಜೇಶ್, ಪೋಲಿಸ್ ಪೇದೆಗಳಾದ ದಕ್ಷಿಣ ಮೂರ್ತಿ, ಶಿವಪ್ಪ, ನಂಜುಂಡಪ್ಪ ಶಾಲೆಯ ವಿಧ್ಯಾರ್ಥಿಗಳು ಹಾಜರಿದ್ದರು.