ಯೂಟರ್ನ್ ಹೊಡೆದ ಶಾಸಕ…

270

ಬಳ್ಳಾರಿ/ಸಿರುಗುಪ್ಪ:ನಾನು ಚುನಾವಣೆಗೆ ಸಿದ್ಧ-ಸಿರುಗುಪ್ಪ ಶಾಸಕ ಬಿ.ಎಂ. ನಾಗರಾಜ ಹೇಳಿಕೆ-ಮೊದಲು ಚುನಾವಣೆಗೆ ನಿಲ್ಲಲ್ಲ ಅಂದಿದ್ರು-ಈಗ ನಿಲ್ತೀನಿ ಅಂತಿದಾರೆ-ಯೂಟರ್ನ್ ಹೊಡೆದ ಶಾಸಕ ಬಿ.ನಾಗರಾಜ

ಸಿರುಗುಪ್ಪ ಶಾಸಕ ಬಿ.ಎಂ.ನಾಗರಾಜ್ ಈ ಹಿಂದೆ ಜನರಿಗೆ, ಮಾದ್ಯಮ ಮತ್ತು ಪತ್ರಿಕೆ ಗಳಲ್ಲಿ ನಾನು ಚುನಾವಣೆಗೆ ಸ್ಪರ್ಧಿಸುವುದಿಲ್ಲವೆಂದು ಹೇಳಿಕೆ ನೀಡಿದ್ರು. ಇದೀಗ ಏಕಾಏಕಿ ಯೂ ಟರ್ನ್‌ ಹೊಡೆದಿದ್ದಾರೆ.

ಬದಲಾದ ರಾಜಕೀಯ ಪರಿಸ್ಥಿತಿ ಮತ್ತು ಪಕ್ಷದ ಹಿರಿಯರು ನನ್ನ ನಿಲುವಿನ ಬಗ್ಗೆ ಪ್ರಶ್ನಿಸಿ, ತಮ್ಮ ಸೇವೆ ಕ್ಷೇತ್ರಕ್ಕೆ ಅವಶ್ಯವಿದ್ದು, ಮುಂದಿನ ಚುನಾವಣೆಗೂ ನೀವೇ ಸ್ಪರ್ಧಿಸ ಬೇಕೆಂದು ಸೂಚಿಸಿದ್ದಾರೆ. ಪಕ್ಷ ಮತ್ತು ಹಿರಿಯರ ಆದೇಶ ಹಾಗೂ ಕಾರ್ಯಕರ್ತರ ಇಚ್ಛೆಯಂತೆ ಮುಂದಿನ ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ ಎಂದಿದ್ದಾರೆ.

ಇದುವರೆಗೂ ಕ್ಷೇತ್ರದಲ್ಲಿ ಯಾವುದೇ ಜಾತಿ ನಿಂದನೆ ಪ್ರಕರಣಗಳು ದಾಖಲಾಗಿಲ್ಲ. ನಾನು ದ್ವೇಷ ರಾಜಕಾರಣ ಮಾಡಿಲ್ಲ. ಚುನಾವಣೆಗೂ ಮುನ್ನ ನೀಡಿದ್ದ ನನ್ನ ಪ್ರಣಾಳಿಕೆಯ ಬಹುತೇಕ ಎಲ್ಲ ಭರವಸೆಗಳನ್ನೂ ಪೂರ್ಣ ಮಾಡಿದ್ದೇನೆ. ಅನುಭವದ ಕೊರತೆ ಹಿನ್ನಲೆಯಲ್ಲೂ ಈ ಸೇವೆ ಮಾಡಿದ್ದೇನೆ. ಹೀಗಾಗಿ ಕ್ಷೇತ್ರದ ಜನತೆ ನನ್ನ ಮೇಲಿಟ್ಟಿರುವ ವಿಶ್ವಾಸಕ್ಕೆ ಮತ್ತು ಪ್ರೀತಿಗೆ ಆಭಾರಿ ಯಾಗಿದ್ದೇನೆ. ಅವರೆಲ್ಲರ ಇಚ್ಛೆಯಂತೆ ಮುಂದಿನ ಚುನಾವಣೆಯಲ್ಲೂ ನಾನೇ ಸ್ಪರ್ಧಿಸಲಿದ್ದೇನೆ ಎಂದು ಇದುವರೆಗೂ ಇದ್ದ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ

ಬೈಟ್: ಬಿ.ಎಂ.ನಾಗರಾಜ್, ಶಾಸಕರು, ಸಿರುಗುಪ್ಪ.