ನಿರಂತರ ಉದ್ಯೋಗಾವಕಾಶ ನೀಡಬೇಕೆಂದು ಪ್ರತಿಭಟನೆ..

281

ಬಳ್ಳಾರಿ:ಉದ್ಯೋಗ ಖಾತ್ರಿ ಯೋಜನೆ ಅಡಿ ಗ್ರಾಮ ಪ್ರದೇಶದ ಕೃಷಿ, ಕಾರ್ಮಿಕರಿಗೆ ನಿರಂತರ ಉದ್ಯೋಗಾವಕಾಶ ನೀಡಬೇಕೆಂದು ಆಗ್ರಹಿಸಿ ಇಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.

ಈ ಕುರಿತು ಸಾಕಷ್ಟು ಅನುದಾನ‌ ಇದ್ದರೂ ಕೂಡ ಅಧಿಕಾರಿಗಳು ಬರಪೀಡಿತ ಜಿಲ್ಲೆಯ ಜನರಿಗೆ ಉದ್ಯೋಗಾವಕಾಶ ನೀಡುತ್ತಿಲ್ಲ ಅಂತ ರೈತ ಕೃಷಿ ಕಾರ್ಮಿಕ ಸಂಘಟನೆ ಹಾಗೂ ಎಐಡಿವೈಓ ಮುಖಂಡರಾದ ಎ.ದೇವದಾಸ್ ಹೇಳಿದ್ದಾರೆ.
ಇಂದು ಕಾರ್ಯಕರ್ತರೊಂದಿಗೆ ಜಿಲ್ಲಾ ಪಂಚಾಯಿತಿಗೆ ಮುತ್ತಿಗೆ ಹಾಕಿದ ಅವರು, ಬಳ್ಳಾರಿ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಬರ ಬಿದ್ದಿದೆ. ರೈತ, ಕೃಷಿ ಕಾರ್ಮಿಕರಿಗೆ ಬರ ಪರಿಹಾರ ನೀಡುವುದೂ ಸೇರಿದಂತೆ ಉದ್ಯೋಗ ಖಾತ್ರಿ ಯೋಜನೆಯಡಿ ಕೆರೆ, ಕುಂಟೆ ಹೊಲಗಳ ಬದುವು ದುರಸ್ತಿಯಡಿ ನಿರಂತರ ಉದ್ಯೋಗಾವಕಾಶ ನೀಡುವಂತೆ ಒತ್ತಾಯಿಸಿದ್ರು.
ಈ ಸಂದರ್ಭದಲ್ಲಿ ಮುಖಂಡರಾದ ಹನುಮಂತಪ್ಪ, ಪಂಪಾಪತಿ, ಹೆಚ್.ಎರ್ರಿಸ್ವಾಮಿ ಇನ್ನಿತರರು ಇದ್ರು.